ಧರೆ ಕುಸಿದು ಬಿದ್ದಿರುವುದು (ಸಂಗ್ರಹ ಚಿತ್ರ)
ಕಾಸರಗೋಡು: ಬಿರುಸಿನ ಗಾಳಿ-ಮಳೆಗೆ ಜಿಲ್ಲೆಯ ವಿವಿಧೆಡೆ ನಷ್ಟ ಉಂಟಾಗಿದೆ.
ಚೆಂಗಳ, ಪಾಣಾರ್ ಕುಳಂ, ಬೇರ್ಕ, ಕೊಯಿಪ್ಪಾಡಿ, ಬಂಬ್ರಾಣನಗರ, ಏರಿಯಪ್ಪಾಡಿಯಲ್ಲಿ ಮರಗಳು ಉರುಳಿವೆ. ಕೋಕಾಲ್ ಎಂಬಲ್ಲಿ ಬಾಲಕೃಷ್ಣನ್ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ತಾಯತ್ ಎಂಬಲ್ಲಿ ಗೋಪಾಲನ್ ಎಂಬುವರ ಮನೆ ಮೇಲೆ ತೆಂಗಿನಮರ, ಚಾತಂಗಾಯಿ ಮಾನಿ ನಿವಾಸಿ ಸುಕುಮಾರನ್ ಎಂಬುವರ ಪಂಪ್ ಹೌಸ್ ಮೇಲೆ ಮರ ಬಿದ್ದು ಹಾನಿಯಾಗಿದೆ.
ಉದುಮಾ ಹೈಯರ್ ಸೆಕೆಂಡರಿ ಶಾಲೆ ಆವರಣದಲ್ಲಿ ತೇಗದ ಮರ ಬಿದ್ದು ಆವರಣಗೋಡೆಗೆ ಹಾನಿಯಾಗಿದೆ. ಹಯಾಸ್ ಎಂಬುವರ ಎರಡು ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದೆ. ಉದುಮಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದ ತೇಗದ ಮರ ಉರುಳಿ ಶಾಲೆ ಹಾನಿಯಾಗಿದೆ. ಉದುಮಾದ ಪೆಟ್ರೋಲ್ ಬಂಕ್ ಬಳಿ ಮತ್ತು ನಂಬ್ಯಾರ್ ಕೂಚ್ಚಿ ಎಂಬಲ್ಲಿ ಮರಗಳು ಉರುಳಿ ಸಂಚಾರ ವ್ಯತ್ಯಯ ಉಂಟಾಗಿತ್ತು. ನಾಲಾಂವಾದುಕ್ಕಲ್-ಮೂಕುನ್ನೋತ್ ಎಂಬಲ್ಲಿನ ಏರೋಲ್ ರಸ್ತೆಯಲ್ಲಿ 13 ವಿದ್ಯುತ್ ಕಂಬಗಳು ಬಿದ್ದಿವೆ.
ನಗರದ ನೆಲ್ಲಿಕುಂಜೆಯಲ್ಲಿ ವ್ಯಕ್ತಿಯೊಬ್ಬರ ಮನೆಯ ಆವರಣಗೋಡೆ ಕುಸಿದಿದ್ದು, ಅಲ್ಲಿ ನಿಲ್ಲಿಸಿದ್ದ ಝಮೀರ್ ಎಂಬುವರ ಕಾರು ಜಖಂಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.