ಬದಿಯಡ್ಕ: ಎರಡನೇ ಬಾರಿಗೆ ಕಾಸರಗೋಡು ಸಂಸದರಾಗಿ ಆಯ್ಕೆಯಾದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ಎಣ್ಮಕಜೆ ಪಂಚಾಯಿತಿಯಲ್ಲಿ ಮತದಾರರಿಗೆ ಕೃತಜ್ಞತಾ ಕಾರ್ಯಕ್ರಮ ನಡೆಸಿದರು.
ಎಣ್ಮಕಜೆ ಯುಡಿಎಫ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿದರು.
ರವೀಂದ್ರನಾಥ ನಾಯಕ್ ಶೇಣಿ ಅಧ್ಯಕ್ಷತೆ ವಹಿಸಿದ್ದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮಾತನಾಡಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಮಂಡಲ ಅಧ್ಯಕ್ಷ ಬಿ.ಎಸ್. ಗಾಂಭೀರ್, ಜಯಶ್ರೀ ಕುಲಾಲ್, ರಾಧಾಕೃಷ್ಣ ನಾಯಕ್ ಶೇಣಿ, ಲಕ್ಷ್ಮಣ ಪ್ರಭು ಕುಂಬಳೆ, ರಮ್ಲ ಇಬ್ರಾಹಿಂ, ಕುಸುಮಾವತಿ ಟೀಚರ್, ಮಾಯಿಲ ನಾಯ್ಕ್, ಅಬ್ದುಲ್ ರಝಾಕ್ ಪೆರ್ಲ, ಹಮೀದ್ ಅಜಿಲಡ್ಕ, ಹಮೀದಾಲಿ ಕಂದಲ್ ಅಬೂಬಕ್ಕರ್ ಪೆರ್ದನೆ, ಎಣ್ಮಕಜೆ ಮುಸ್ಲಿಂಲೀಗ್ ಅಧ್ಯಕ್ಷ ಎ.ಕೆ. ಶರಿಫ್, ಸಿದ್ದೀಕ್ ಖಂಡಿಗೆ, ಸಿದ್ಧಿಕ್ ವಳಮುಗೇರು, ಹಕೀಂ ಖಂಡಿಗೆ, ಆಯಿಷಾ ಎ.ಎ, ಆಶ್ರಫ್ ಅಮೆಕ್ಕಳ, ಕಾಂಗ್ರೆಸ್ ಮುಖಂಡ ಅಮು ಅಡ್ಕಸ್ಥಳ, ಆನಂದ ಮವ್ವಾರು, ಐತ್ತಪ್ಪ ಕುಲಾಲ್, ಅಬ್ದುಲ್ಲ ಕುರೆಡ್ಕ, ರಝಾಕ್ ನಲ್ಕ, ಯುವ ಕಾಂಗ್ರೆಸ್ ಮಂಡಲ ಅಧ್ಯಕ್ಷ ಫಾರೂಕ್ ಪಳ್ಳಂ, ರಾಜು ಜಾನ್ ಡಿಸೋಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.