ADVERTISEMENT

ರಾಜಕೀಯವಿಲ್ಲದ ಧಾರ್ಮಿಕ ಆಚರಣೆ ಅರ್ಥಪೂರ್ಣ: ಶಶಿಧರ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:31 IST
Last Updated 8 ಸೆಪ್ಟೆಂಬರ್ 2024, 13:31 IST
ಓಡೀಲು ಗಣೇಶೋತ್ಸವದಲ್ಲಿ ಲ್ಯಾನ್ಸಿ ಪಿಂಟೊ ಹಾಗೂ‌ ಜೋಯೆಲ್ ಮೆಂಡೊನ್ಸಾ ಅವರನ್ನು ಗೌರವಿಸಲಾಯಿತು
ಓಡೀಲು ಗಣೇಶೋತ್ಸವದಲ್ಲಿ ಲ್ಯಾನ್ಸಿ ಪಿಂಟೊ ಹಾಗೂ‌ ಜೋಯೆಲ್ ಮೆಂಡೊನ್ಸಾ ಅವರನ್ನು ಗೌರವಿಸಲಾಯಿತು   

ಬೆಳ್ತಂಗಡಿ: ‘ಎಲ್ಲರೂ ಏಕತಾ ಭಾವದಿಂದ ಇರಬೇಕು ಎಂಬುದೇ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಉದ್ಧೇಶ' ಎಂದು ಬರೋಡದ ಉದ್ಯಮಿ, ಓಡೀಲು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹೇಳಿದರು.

ಶ್ರೀ ಕ್ಷೇತ್ರ ಓಡೀಲಿನಲ್ಲಿ ನಡೆದ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು 'ರಾಜಕೀಯ ಉದ್ದೇಶದಿಂದ ಗಣೇಶೋತ್ಸವ ಆಚರಣೆ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ಖೇಧಕರ. ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯರಹಿತವಾಗಿದ್ದರೆ ಅರ್ಥಪೂರ್ಣ' ಎಂದರು.

ಉಜಿರೆ ಎಸ್‌ಡಿಎಂ ಕಾಲೇಜು ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಧಾರ್ಮಿಕ ಉಪನ್ಯಾಸ ಮಾಡಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜ್ ಪ್ರಕಾಶ್ ಮೂಡ್ಡೈಲು ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ಲ್ಯಾನ್ಸಿ ಪಿಂಟೊ ಹಾಗೂ ಜೋಯೆಲ್ ಮೆಂಡೊನ್ಸಾ ಅವರನ್ನು ಗೌರವಿಸಲಾಯಿತು.

ADVERTISEMENT

ಪಡಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್, ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಜಯ ಸಾಲ್ಯಾನ್ ಪಣಕಜೆ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ, ಕೋಶಾಧಿಕಾರಿ ಲಕ್ಷ್ಮೀಕಾಂತ್ ಶೆಟ್ಟಿ ಮೂಡ್ಡೈಲು ಇದ್ದರು. ಜಯಕರ್ ಶೆಟ್ಟಿ ಮೂಡ್ಡೈಲು ಸ್ವಾಗತಿಸಿದರು. ನಿತಿನ್ ಗುರುವಾಯನಕೆರೆ ನಿರೂಪಿಸಿದರು. ಅಶ್ವಿತ್ ಮೂಲ್ಯ ಓಡೀಲು ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.