ADVERTISEMENT

₹ 1.62 ಕೋಟಿ ಕಾಮಗಾರಿಗೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:14 IST
Last Updated 1 ಆಗಸ್ಟ್ 2021, 2:14 IST
ಮೂಡುಬಿದಿರೆಯ ಪಡುಮಾರ್ನಾಡಿನಲ್ಲಿ ಶನಿವಾರ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.
ಮೂಡುಬಿದಿರೆಯ ಪಡುಮಾರ್ನಾಡಿನಲ್ಲಿ ಶನಿವಾರ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.   

ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದಲ್ಲಿ ‘ಜಲಜೀವನ್ ಮಿಷನ್’ ಯೋಜನೆಯಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 1.62 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಶಿಲಾನ್ಯಾಸ ನೆರವೇರಿಸಿದರು.

ಪ್ರತಿಯೊಬ್ಬರಿಗೂ ಮೂಲ ಸೌಕರ್ಯಗಳು ಅಗತ್ಯವಾಗಿ ಬೇಕು. ಸರ್ಕಾರದ ಸೌಲಭ್ಯ ಪ್ರತಿ ಮನೆಗೂ ತಲುಪಬೇಕು ಎನ್ನುವುದು ಪ್ರಧಾನಿ ಸಂಕಲ್ಪ. ಈ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ₹ 52 ಕೋಟಿ ಅನುದಾನ ಬಂದಿದೆ. ಪೈಲಟ್ ಯೋಜನೆಯಲ್ಲಿ ಮೂಡುಬಿದಿರೆಗೆ ₹ 150 ಕೋಟಿ ಅನುದಾನ ಬಂದಿದೆ ಎಂದರು.

ಭವಿಷ್ಯದಲ್ಲಿ ಗ್ರಾಮದ ಪ್ರತಿ ಮನೆಗೂ ಕುಡಿಯುವ ನೀರು ದೊರೆಯಲಿದೆ. ನೀರಿಗಾಗಿ ತೊಂದರೆ ಅನುಭವಿಸುವ ಕಾಲ ದೂರವಾಗಲಿದೆ ಎಂದರು. ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಶ್ರೀನಾಥ್ ಸುವರ್ಣ, ರಮೇಶ್ ಶೆಟ್ಟಿ, ಪ್ರಮೀಳಾ.ಜೆ, ಕುಸುಮಾ, ಟೆಸ್ಲೀನಾ ರೊಡ್ರಿಗಸ್, ನಿತಿನ್ ಕೋಟ್ಯಾನ್, ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ಪೈ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.