ADVERTISEMENT

ಸತೀಶ್ ಕಾಶಿಪಟ್ಣಗೆ ಹುಟ್ಟೂರ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:32 IST
Last Updated 18 ಡಿಸೆಂಬರ್ 2025, 6:32 IST
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣ ಅವರಿಗೆ ಹುಟ್ಟೂರ ಅಭಿನಂದನೆ ನಡೆಯಿತು 
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣ ಅವರಿಗೆ ಹುಟ್ಟೂರ ಅಭಿನಂದನೆ ನಡೆಯಿತು    

ಬೆಳ್ತಂಗಡಿ: 'ಸಮಾಜದಲ್ಲಿ ಇನ್ನೊಬ್ಬರಿಗಾಗಿ ಜೀವನ ಮುಡಿಪಾಗಿಡುವುದೇ ಜೀವಂತಿಕೆಯ ಲಕ್ಷಣ. ಅಂತಹ ಸೇವೆಯನ್ನು ಬದುಕಿನುದ್ದಕ್ಕೂ ಮಾಡಿಕೊಂಡು ಬಂದವರು ಸತೀಶ್ ಕೆ ಕಾಶಿಪಟ್ಣ' ಎಂದು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.

ಕರ್ನಾಟಕ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣ ಅವರಿಗಾಗಿ ಬುಧವಾರ ಇಲ್ಲಿ ನಡೆದ ಹುಟ್ಟೂರು ಅಭಿನಂದನಾ ಸಮಾರಂಭದಲ್ಲಿ ವರು ಮಾತನಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಮಾತನಾಡಿ ರಾಜಕೀಯ ರಂಗ ಹಾಗೂ ಸಹಕಾರ ರಂಗವನ್ನು ಸೇವೆಗಾಗಿಯೇ ಮುಡಿಪಾಗಿಸಿಕೊಂಡ ಕಾಶಿಪಟ್ಣ ಅವರ ಕಾರ್ಯ ಶ್ಲಾಘನೀಯ' ಎಂದರು. 

ADVERTISEMENT

ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಅನುವಂಶೀಯ ಆಡಳಿ ಎ.ಜೀವಂದರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಳದಂಗಡಿ ಅರಮನೆಯ ಡಾ. ಪದ್ಮ ಪ್ರಸಾದ್ ಅಜಿಲ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ ರೈ ಬಾಲ್ಯೊಟ್ಟು, ನಿಶ್ಮಿತಾ ಟವರ್ಸ್ ಮೂಡಬಿದಿರೆ ಇದರ ಮಾಲಕ ನಾರಾಯಣ ಪಿ.ಎಂ., ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಧರಣೇಂದ್ರ ಕುಮಾರ್, ಶೇಖರ್ ಕುಕ್ಕೇಡಿ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ, ಉಪಾಧ್ಯಕ್ಷ ಜಗದೀಶ್ ಚಂದ್ರ ಡಿ.ಕೆ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಬಂಟ್ವಾಳ ನಗರ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದಾರ್, ಬೆಳ್ತಂಗಡಿ ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ರಾಜು ಪೂಜಾರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ನಿಶ್ಮಿತಾ ಟವರ್ಸ್ ಮೂಡಬಿದಿರೆ ಇದರ ಮಾಲಕ ನಾರಾಯಣ ಪಿ.ಎಂ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ, ಉದ್ಯಮಿ ರಿಚರ್ಡ್ ಜಾರ್ಜ್ ಪಿಂಟೋ, ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಾ, ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ ಕುಮಾರ್ ಜೈನ್, ಉಪಾಧ್ಯಕ್ಷ ಚಿಂತನ್ ಲೋಬೊ , ಶಾಲಾ ಮುಖ್ಯೋಪಾಧ್ಯಾಯಿನಿ ವೃಂದಾ ಪಿ.ಎಸ್., ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶುಭವಿ, ಶಾಲಾ ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷೆ ವನಿತಾ ಮಾಕಲಡ್ಡ ಪಾಲ್ಗೊಂಡಿದ್ದರು.

ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮೆರವಣಿಗೆ ನಡೆಯಿತು. ಕಾಶಿಪಟ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ಅಭಿನಂದನಾ ಕಾರ್ಯಕ್ರಮ, ಮೂಡಬಿದ್ರೆ 'ಪಿಂಗಾರ ಕಲಾವಿದರಿಂದ 'ಓಂಕಾರ' ನಾಟಕ ಇತ್ತು. ಕಾಶಿಪಟ್ಣ ಪ್ರೌಢ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಭಿನಂದನಾ ಸಮಿತಿ ಕಾರ್ಯದರ್ಶಿ ಮನೋಜ್ ಕಾಶಿಪಟ್ಣ ಸ್ವಾಗತಿಸಿದರು. ಕಾಶಿಪಟ್ಣ ಸರ್ಕಾರಿ ಪ್ರೌಡಶಾಲಾ ಶಿಕ್ಷಕ ದೇವುದಾಸ್ ನಾಯಕ್ ಹಾಗೂ ಸತೀಶ್ ಹೊಸ್ಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.