ADVERTISEMENT

ಮಂಗಳೂರಿನ ಎ.ಜೆ. ಕಾಲೇಜಿನಲ್ಲಿ ಸಾವಿಷ್ಕಾರ್‌ ಅನ್ವೇಷನ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 4:12 IST
Last Updated 5 ಡಿಸೆಂಬರ್ 2022, 4:12 IST
ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯಲ್ಲಿ ‘ಸಾವಿಷ್ಕಾರ್‌ ಅನ್ವೇಷನ್‌–2022’ ಕಾರ್ಯಕ್ರಮಕ್ಕೆ ಯುವ ಉದ್ಯಮಿ ಅಶ್ವತ್ಥ್‌ ಹೆಗ್ಡೆ ಶನಿವಾರ ಚಾಲನೆ ನೀಡಿದರು.
ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯಲ್ಲಿ ‘ಸಾವಿಷ್ಕಾರ್‌ ಅನ್ವೇಷನ್‌–2022’ ಕಾರ್ಯಕ್ರಮಕ್ಕೆ ಯುವ ಉದ್ಯಮಿ ಅಶ್ವತ್ಥ್‌ ಹೆಗ್ಡೆ ಶನಿವಾರ ಚಾಲನೆ ನೀಡಿದರು.   

ಮಂಗಳೂರು: ನಗರದ ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿಯಲ್ಲಿ ‘ಸಾವಿಷ್ಕಾರ್‌ ಅನ್ವೇಷನ್‌–2022’ ಕಾರ್ಯಕ್ರಮಕ್ಕೆ ಬೆಂಗಳೂರಿನ ಎನ್ವಿಗ್ರೀನ್ ಬಯೋಟೆಕ್ ಲಿಮಿಟೆಡ್‌ನ ಸಿಇಒ ಅಶ್ವತ್ಥ್‌ ಹೆಗ್ಡೆ ಶನಿವಾರ ಚಾಲನೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಶಾಂತಾರಾಮ ರೈ ಅಧ್ಯಕ್ಷತೆ ವಹಿಸಿದರು. ಸಾವಿಷ್ಕಾರ್‌ನ ರಾಷ್ಟ್ರೀಯ ಸಹ ಸಂಚಾಲಕ ಧರಣೀಶ್ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀಪಾದ ತಂತ್ರಿ ಪೊಳಲಿ ವಂದಿಸಿದರು.

ಎರಡು ದಿನ ನಡೆದ ಐದು ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಜಗದೀಶ್ ಶೇಖರ್ ನಾಯಕ್, ಡಾ.ದಶರಥ್‌ ರಾಜ್ ಶೆಟ್ಟಿ, ಡಾ.ಅನಂತಪದ್ಮನಾಭ ಆಚಾರ್, ಮೋಹನ್ ಶಾಂತಿಗ್ರಾಮ ಭಾಗವಹಿಸಿದ್ದರು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 12 ಎಂಜಿನಿಯರಿಂಗ್ ಕಾಲೇಜಿನ 320 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ADVERTISEMENT

ಭಾನುವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಎವಿಬಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಭಾಗವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ಡಾ.ಆಂತನಿ ಪಿ.ಜೆ ಅಧ್ಯಕ್ಷತೆ ವಹಿಸಿದ್ದರು. ಧರಣೀಶ್ ಹೆಗಡೆ ಸ್ವಾಗತಿಸಿದರು. ನಿಶಾನ್ ಆಳ್ವ ಕಾರ್ಯಕ್ರಮ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.