ADVERTISEMENT

ವಾಣಿಜ್ಯ ವಿಭಾಗದ ಅರ್ಚನ ಎನ್.ಕೆ ರಾಜ್ಯಕ್ಕೆ 5ನೇ ರ‍್ಯಾಂಕ್

ಪಿಯು ಫಲಿತಾಂಶ: ಶಕ್ತಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ 100ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 6:06 IST
Last Updated 11 ಏಪ್ರಿಲ್ 2024, 6:06 IST
ಅರ್ಚನ ಎನ್‌ ಕೆ
ಅರ್ಚನ ಎನ್‌ ಕೆ   

ಮಂಗಳೂರು: ಶಕ್ತಿನಗರದ ಶಕ್ತಿ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ಶೇ 100ರಷ್ಟು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ 97.2ರಷ್ಟು ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದ (ಎಸ್‌ಇಬಿಎ) ಅರ್ಚನ ಎನ್.ಕೆ. 593 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 5ನೇ ರ‍್ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್ ಕಲ್ಲೂರಾಯ 589 ಅಂಕ ಗಳಿಸಿ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಒಟ್ಟು 211 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 129 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 79 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ADVERTISEMENT

ಪಿಸಿಎಂಸಿಯಲ್ಲಿ ರೋಹಿತ್ ಕಲ್ಲೂರಾಯ 589 ಅಂಕ, ಪಿಸಿಎಂಬಿಯಲ್ಲಿ ಮೌನ ಜಿ. 585 ಅಂಕ, ಪಿಸಿಎಂಸಿಯಲ್ಲಿ ಪ್ರತಿಕ್ಷಾ ಬಿ.ಪಿ.584 ಅಂಕ, ದೇವಿಕಾ ಸಿ.ಪೈ 584, ಸ್ವಪ್ನ 581, ಕಾವ್ಯ ಡಿ ಮಾರ್ಲ 581, ಕಾರ್ತಿಕ್ ಎಚ್.ಎಸ್ 580, ಮಿಥಾಲಿ ಆರ್ ಅಮಿನ್ 579, ಎನ್ ಹಿತೇಶ್ ಕುಮಾರ್ 578, ಪ್ರಥಮೇಶ್ ಶೆಣೈ ಕುಡ್ಪಿ 577, ವಂಶಿ ಎಚ್ ಆರ್ 575 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 20 ಮಂದಿ ವಿಶಿಷ್ಟ ಶ್ರೇಣಿ, 36 ಮಂದಿ ಪ್ರಥಮ ಶ್ರೇಣಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಾಣಿಜ್ಯ ವಿಭಾಗದ ಸಿಇಬಿಎಯ ನಿಹಾರೀಕ ಕೆ.ಆರ್ 586 ಅಂಕ ಪಡೆದಿದ್ದಾರೆ.

ಮೌನ
ದೇವಿಕಾ
ಪ್ರತಿಕ್ಷಾ ಬಿ.ಪಿ
ಸ್ವಪ್ನಾ
ಕಾವ್ಯಾ ಡಿ
ಕಾರ್ತಿಕ ಎಚ್‌
ಮಿಥಾಲಿ ಆರ್‌
ಎನ್ ಹಿತೇಶ್ ಕುಮಾರ್
ಪ್ರಥಮೇಶ್‌
ವಂಶಿ ಎಚ್‌ ಆರ್‌
ನಿಹಾರೀಕ ಕೆ ಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.