ಶಿರಾಡಿ (ಉಪ್ಪಿನಂಗಡಿ): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಬರ್ಚಿನಹಳ್ಳ ಎಂಬಲ್ಲಿ ಶನಿವಾರ ಮುಂಜಾನೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ವೊಂದು ಮಗುಚಿ ಅದರಲ್ಲಿದ್ದ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮೂಡುಬಿದಿರೆಯ ಫಹದ್, ಪರಂಗಿಪೇಟೆಯ ರಂಝೀನ್, ದೇರಳಕಟ್ಟೆಯ ಉಮ್ಮರ್, ಪುತ್ತೂರಿನ ತಮೀನ್, ಪುತ್ತೂರು ಸಾಲ್ಮರದ ಇಷಾಮ್, ಉಪ್ಪಿನಂಗಡಿಯ ರುಕ್ಮಯ, ಬಂಟ್ವಾಳ ಸಾಲೆತ್ತೂರಿನ ಜಾಹಿರ್, ವಿಟ್ಲ ಶಮೀರ್, ವಿಟ್ಲದ ಆನ್ಸರ್, ಬೆಂಗಳೂರಿನ ದಾಸರಪುರದ ಸೋಮಶೇಖರ, ಶರತ್, ನೆಲಮಂಗಲ ಡಾ.ಮಹಂತ್ ಗೌಡ, ಪುತ್ತೂರು ಸಂಪ್ಯದ ಸಿಮಾಕ್, ಅಬ್ದುಲ್ ರಜೀದ್, ಮೂಡಬಿದಿರೆ ಕೈಕಂಬದ ಪೌಝಿಲ್, ಅಲ್ತಾಫ್ ಎಂದು ಗುರುತಿಸಲಾಗಿದೆ.
ಘಟನೆ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ 15 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ, ಒಬ್ಬನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಿಂದ ಸುಮಾರು 8 ಆಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಸ್ಥಳಾಂತರಿಸಲಾಯಿತು. ಇವರಲ್ಲಿ ಮೂವರು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.