ಪುತ್ತೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ, ಸಂತಕವಿ ಸರ್ವಜ್ಞ ಜಯಂತಿಯಲ್ಲಿ ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು. ನಿವೃತ್ತ ಶಿಕ್ಷಕಿ ಶುಭಲತಾ, ತಹಶೀಲ್ದಾರ್ ಪುರಂದರ ಹೆಗ್ಡೆ ಭಾಗವಹಿಸಿದ್ದರು
ಪುತ್ತೂರು: ಜೀಜಾಬಾಯಿ ಅವರು ಪುತ್ರ ಛತ್ರಪತಿ ಶಿವಾಜಿ ಅವರನ್ನು ಸ್ವಾಭಿಮಾನಿಯನ್ನಾಗಿ ಬೆಳೆಸಿದ್ದರಿಂದ ಶಿವಾಜಿ ಮಹಾರಾಜರಾದರು. ಪೋಷಕರು ಮಕ್ಕಳನ್ನು ಸ್ಪರ್ಧೆಗೆ ಬೆಳೆಸದೆ, ಜವಾಬ್ದಾರಿ ತಿಳಿಸುವ ಮೂಲಕ ತಳ ಮಟ್ಟದ ಮೌಲ್ಯವನ್ನು ನೀಡಿ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಕುಲಾಲ ಸಮಾಜ ಸೇವಾ ಸಂಘದ ವತಿಯಿಂದ ಪುತ್ತೂರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ, ಸಂತಕವಿ ಸರ್ವಜ್ಞ ಜಯಂತಿಯಲ್ಲಿ ಅವರು ಮಾತನಾಡಿದರು.
ಶಿವಾಜಿ ಮತ್ತು ಸರ್ವಜ್ಞನ ಕುರಿತು ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕಿ ಶುಭಲತಾ ಹಾರಾಡಿ, ಕುಂಬಾರ ವಂಶದ ಹೆಮ್ಮೆಯ ಕುಡಿಯಾದ ಸರ್ವಜ್ಞನ ವಚನವು ಮಾಣಿಕ್ಯವಾಗಿದೆ. ಸರ್ವಜ್ಞ ಹೇಳಿರುವಂತೆ ನಮ್ಮೊಳಗಿರುವ ದೇವರನ್ನು ಗುರುತಿಸುವ ಕೆಲಸಆಗಬೇಕು ಎಂದರು.
ಚತುರೋಪಾಯ, ಸಮಯೋಚಿತ ನಿರ್ಧಾರ, ಚಾಣಾಕ್ಷತೆ ಮೈಗೂಡಿಸಿಕೊಂಡಿದ್ದ ಛತ್ರಪತಿ ಶಿವಾಜಿ ರಾಷ್ಟ್ರಪ್ರೇಮ, ಸ್ವಧರ್ಮ ಪ್ರೇಮ ಮತ್ತು ಸ್ವರಾಜ್ಯ ಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಪುತ್ತೂರು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಪುತ್ತೂರು ತಾಲ್ಲೂಕು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕುಲಾಲ್ ಭಾಗವಹಿಸಿದ್ದರು.
ತಾಲ್ಲೂಕು ಕಚೇರಿಯ ಸಿಬ್ಬಂದಿ ದಯಾನಂದ ಸ್ವಾಗತಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.