ADVERTISEMENT

ಪುತ್ತೂರು| ಶಾರ್ಟ್‌ ಸರ್ಕಿಟ್‌: ಕಿಡಿಬಿದ್ದು ಕಾರು ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:08 IST
Last Updated 19 ಜನವರಿ 2026, 4:08 IST
ಬೆಂಕಿಗಾಹುತಿಯಾದ ಕಾರು
ಬೆಂಕಿಗಾಹುತಿಯಾದ ಕಾರು    

ಪುತ್ತೂರು: ತಾಲ್ಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಭಾನುವಾರ ಮಧ್ಯಾಹ್ನ ನೇಮೋತ್ಸವ ನಡೆಯುತ್ತಿದ್ದ ವೇಳೆ ಸಂತೆ ಗದ್ದೆಯಲ್ಲಿ ಹಾರಿಸಿದ ಬಲೂನ್ ವಿದ್ಯುತ್ ತಂತಿಗೆ ಸ್ಪರ್ಶಗೊಂಡು ಶಾರ್ಟ್‌ ಸರ್ಕಿಟ್‌ ಉಂಟಾಗಿದೆ. ಇದರಿಂದ ಉಂಟಾದ ಬೆಂಕಿಯ ಕಿಡಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದು, ಸುಟ್ಟು ಹೋಗಿದೆ.

ಬಡಗನ್ನೂರು ಗ್ರಾಮದ ಪಟ್ಟೆಯ ಹರೀಶ್ ಎಂಬುವರು ಕಾರು ನಿಲ್ಲಿಸಿ ನೇಮೋತ್ಸವಕ್ಕೆ ತೆರಳಿದ್ದರು. ಬೆಂಕಿ ಹತ್ತಿಕೊಂಡ ಬಳಿಕ ಕಾರು ಮುಂಭಾಗಕ್ಕೆ ಚಲಿಸಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ನೇಮೋತ್ಸವಕ್ಕೆ ಬಂದಿದ್ದವರು ‌ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದು, ಆ ವೇಳೆಗಾಗಲೇ ಕಾರು ಸುಟ್ಟು ಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT