
ಪ್ರಜಾವಾಣಿ ವಾರ್ತೆ
ಬಂಟ್ವಾಳ: ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಯುನೆಸ್ಕೊ ವತಿಯಿಂದ ವಿಶ್ವ ಪರಂಪರಾ ಪಟ್ಟಿಗೆ ವಿವಿಧ ರಾಷ್ಟ್ರಗಳ ಐತಿಹಾಸಿಕ ನಿವೇಶನ ಸೇರ್ಪಡೆಗೊಳಿಸ ಮಹಾಸಭೆಯು ಬೆಹರಿನ್‌ನ ಮನಾಮದಲ್ಲಿ ನಡೆಯುತ್ತಿದ್ದು, ಭಾರತ ಮೂಲದ ಸಿಂಧೂರ ಟಿ.ಪಿ ಜರ್ಮನಿ ಕೊಟ್ಬಸ್ ಬಿಟಿಯು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.
ಇವರು ಬಂಟ್ವಾಳದವರಾಗಿದ್ದು, ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ಕೆ. ತುಕಾರಾಮ ಪೂಜಾರಿ ಮತ್ತು ನಿರ್ದೇಶಕಿ ಡಾ. ಆಶಾಲತಾ ಸುವರ್ಣ ದಂಪತಿಯ ಪುತ್ರಿ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.