ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:45 IST
Last Updated 12 ಜನವರಿ 2026, 6:45 IST
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್‌ಕುಮಾರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಆರ್. ಪೈ ಪ್ರಶಸ್ತಿ ಸ್ವೀಕರಿಸಿದರು
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್‌ಕುಮಾರ್ ಮತ್ತು ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ ಆರ್. ಪೈ ಪ್ರಶಸ್ತಿ ಸ್ವೀಕರಿಸಿದರು   

ಉಜಿರೆ: ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸ್ವ-ಸಹಾಯ ಸಂಘಗಳನ್ನು ರಚಿಸಿ, ಆರ್ಥಿಕ ಸೇರ್ಪಡೆಗೊಳಿಸುವ ಮೂಲಕ ಬಡವರ ಸಬಲೀಕರಣಕ್ಕಾಗಿ ಉನ್ನತ ಸೇವೆ ಹಾಗೂ ಸಾಧನೆ ಮಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ‘ಸ್ಕಾಚ್ ಸಮೂಹ ಸಂಸ್ಥೆ ನೀಡುವ 2025ನೇ ಸಾಲಿನ ‘ಸ್ಕಾಚ್ ಆರ್ಥಿಕ ಸೇರ್ಪಡೆ ಪ್ರಶಸ್ತಿ’ ಪ್ರದಾನ ಮಾಡಿದೆ.

ನವದೆಹಲಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್‌ಕುಮಾರ್ ಮತ್ತು ಮುಖ್ಯಹಣಕಾಸು ಅಧಿಕಾರಿ ಶಾಂತಾರಾಮ ಆರ್.ಪೈ ಸ್ಕಾಚ್ ಗ್ರೂಪ್‌ನ ಮುಖ್ಯಸ್ಥ ಸಮೀರ್ ಕೊಚ್ಚಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT