ADVERTISEMENT

ಮಂಗಳೂರಿಗೆ ಬಾಲಿವುಡ್ ನಟ ಸೋನು ಸೂದ್ ಭೇಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 9:36 IST
Last Updated 6 ಜುಲೈ 2022, 9:36 IST
ಸೋನು ಸೂದ್ ಅವರನ್ನು ಸ್ವಾಗತಿಸಿದ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ ನಿರ್ದೇಶಕಿ ಡಾ. ಹಿಲ್ದಾ ರಾಯಪ್ಪನ್
ಸೋನು ಸೂದ್ ಅವರನ್ನು ಸ್ವಾಗತಿಸಿದ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ ನಿರ್ದೇಶಕಿ ಡಾ. ಹಿಲ್ದಾ ರಾಯಪ್ಪನ್   

ಮಂಗಳೂರು: ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಬುಧವಾರ ಮಂಗಳೂರಿಗೆ ಭೇಟಿ ನೀಡಿದ್ದಾರೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ ನಿರ್ದೇಶಕಿ ಡಾ. ಹಿಲ್ದಾ ರಾಯಪ್ಪನ್ ಸ್ವಾಗತಿಸಿದರು. ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಸೋನು ಸೂದ್ ಅವರು ದೇಶದ ವಿವಿಧ ಭಾಗಗಳಿಗೆ ನೆರವಾದಂತೆ ಮಂಗಳೂರಿಗೂ ಸಹ ಆಮ್ಲಜನಕ ಸಿಲಿಂಡರ್ ಒದಗಿಸುವಲ್ಲಿ ಮುತುವರ್ಜಿ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.