ADVERTISEMENT

ಚೂರಿ ಇರಿತ: ಯುವ ಮೋರ್ಚಾ, ವಿಎಚ್‌ಪಿ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 5:29 IST
Last Updated 11 ಜೂನ್ 2024, 5:29 IST

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಜಯೋತ್ಸವ ಆಚರಿಸುತ್ತಿದ್ದ  ಹಿಂದೂ ಕಾರ್ಯಕರ್ತರಾದ ಹರೀಶ್‌ ಹಾಗೂ ನಂದಕುಮಾರ್‌ ಅವರಿಗೆ ಬೋಳಿಯಾರ್‌ನಲ್ಲಿ ಚೂರಿ ಇರಿದ ಕೃತ್ಯ ಖಂಡನೀಯ‘ ಎಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಬಿಜೆಪಿಯ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕಗಳು ಹೇಳಿವೆ.

‘ಸುಮಾರು 25 ಮಂದಿಯ ಗುಂಪು ಈ ಕೃತ್ಯ ನಡೆಸಿದೆ. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮತ್ತು ಮುಸ್ಲಿಮರ ಓಲೈಕೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ತಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಈ  ಕೃತ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ ಹಾಗೂ ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಕೊಳಕು ರಾಜಕೀಯ: ‘ಚೂರಿ ಇರಿತಕ್ಕೆ ಒಳಗಾದ ಇಬ್ಬರೂ ಬಿಲ್ಲವ ಸಮಾಜದವರು. ಯಾವ ಕಾಂಗ್ರೆಸ್ ತನ್ನ ಚುನಾವಣಾ ರಾಜಕೀಯದಲ್ಲಿ ಬಿಲ್ಲವರನ್ನು ಸಂಘ ಪರಿವಾರದ ವಿರುದ್ಧ ಎತ್ತಿಕಟ್ಟುವ ಮೂಲಕ ಚುನಾವಣೆಯಲ್ಲಿ ಮತವನ್ನು ಸೆಳೆಯಲು ಯತ್ನಿಸಿತ್ತೋ, ಇವತ್ತು ಅದೇ ಕಾಂಗ್ರೆಸ್‌ ಬಿಲ್ಲವರ ರಕ್ಷಣೆಗೆ ನಿರಾಸಕ್ತಿ ತೋರಿಸಿದೆ. ಮತಾಂಧರ ಪರವಾಗಿ ನಿಂತುಕೊಂಡಿದೆ. ಇದು ಅವರ ಕೊಳಕು ರಾಜಕೀಯಕ್ಕೆ ಹಿಡಿದ ಕೈಗನ್ನಡಿ’ ಎಂದು  ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ.

ADVERTISEMENT

 ‘ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಿದ್ದೇವೆ’ ಎಂದು ಅವರು ಎಚ್ಚರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.