ADVERTISEMENT

ಮಕ್ಕಳಿಗೆ ಪಾಠದ ಜತೆಗೆ ಕೌನ್ಸಿಲಿಂಗ್, ಆರೋಗ್ಯ ಜಾಗೃತಿ ಅಗತ್ಯ: ಅಶೋಕ್ ರೈ

ಪುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:05 IST
Last Updated 6 ಸೆಪ್ಟೆಂಬರ್ 2025, 4:05 IST
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಶುಕ್ರವಾರ ನಡೆದ ಪುತ್ತೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ-ಗುರುವಂದನಾ ಸಮಾರಂಭವನ್ನು ಶಾಸಕ ಅಶೋಕ್‌ಕುಮಾರ್ ರೈ ಉದ್ಘಾಟಿಸಿದರು
ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಶುಕ್ರವಾರ ನಡೆದ ಪುತ್ತೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ-ಗುರುವಂದನಾ ಸಮಾರಂಭವನ್ನು ಶಾಸಕ ಅಶೋಕ್‌ಕುಮಾರ್ ರೈ ಉದ್ಘಾಟಿಸಿದರು   

ಪುತ್ತೂರು: ಇಂದು ಮಕ್ಕಳಿಗೆ ಪಾಠದ ಜತೆಗೆ ಕೌನ್ಸೆಲಿಂಗ್, ಆರೋಗ್ಯ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.

ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಶುಕ್ರವಾರ ನಡೆದ ಅವಿಭಜಿತ ಪುತ್ತೂರು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ-ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮುಖಂಡ ಸಂಜೀವ ಮಠಂದೂರು ಮಾತನಾಡಿದರು.

ಪ್ರಮುಖರಾದ ಅಮಳ ರಾಮಚಂದ್ರ, ಕಾವು ಹೇಮನಾಥ ಶೆಟ್ಟಿ, ಸತೀಶ್ ಕುಮಾರ್ ಕೆಡೆಂಜಿ, ನವೀನ್‌ಕುಮಾರ್ ಭಂಡಾರಿ, ಶಿವಾನಂದ ಆಚಾರ್ಯ, ವಿಷ್ಣುಪ್ರಸಾದ್ ಸಿ., ಸುಂದರ ಗೌಡ, ಅಬ್ರಹಾಂ, ‌ಶ್ಯಾಮಲಾ, ವಸಂತ ಮೂಲ್ಯ, ರಾಮಕೃಷ್ಣ ಮಲ್ಲಾರ, ಶಾಂತಾರಾಮ ಓಡ್ಲ, ಮಾಮಚ್ಚನ್, ಕೃಷ್ಣಯ್ಯ, ನಾಗೇಶ್ ಪಾಟಾಳಿ, ವಿಜಯ, ಬಾಲಕೃಷ್ಣ, ಸಾಂತಪ್ಪ ಗೌಡ ಭಾಗವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಸ್ವಾಗತಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟಿಫನ್ ವೇಗಸ್ ವಂದಿಸಿದರು. ಸಿಆರ್‌ಪಿಗಳಾದ ಪರಮೇಶ್ವರಿ ಮತ್ತು ಪ್ರಕಾಶ್ ನಿರೂಪಿಸಿದರು.

ಶಿಕ್ಷಕ ಸೇವೆಯಲ್ಲಿರುವಾಗ ನಿಧನರಾದ ಪ್ರದೀಪ್ ಎಂ., ಆನಂದ ಗೌಡ ಪಿ., ದೇವಿಪ್ರಸಾದ್ ಕೆ.ಸಿ. ಅವರ ಸೇವೆಯನ್ನು ಸ್ಮರಿಸಿ ಮನೆಯವರಿಗೆ ಗೌರವ ಸಲ್ಲಿಸಲಾಯಿತು.

ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. 2024ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಯಶೋದಾ, ರಾಮಣ್ಣ ರೈ, ಲಲಿತಾ ಅವರನ್ನು ಸನ್ಮಾನಿಸಲಾಯಿತು.

ಪಿಎಂಶ್ರೀ ಪ್ರಶಸ್ತಿ ಪುರಸ್ಕೃತ ವೀರಮಂಗಲ ಪಿಎಂಶ್ರೀ ಶಾಲೆಯನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಹಾಗೂ ದ.ಕ. ಜಿಲ್ಲೆಗೆ ಪುತ್ತೂರು ಪ್ರಥಮ ಸ್ಥಾನ ಗಳಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಅವರನ್ನು ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.