
ಮಂಗಳೂರು: ಸುಧೀಂದ್ರ ತೀರ್ಥ ಸ್ವಾಮೀಜಿ ಜನ್ಮಶತಾಬ್ದಿಯ ಮಂಗಳೋತ್ಸವದ ಪ್ರಯುಕ್ತ ನಗರದಲ್ಲಿ ಏರ್ಪಡಿಸಿದ್ದ ವ್ಯಾಸ ಧ್ವಜ ಸಂಕೀರ್ತನಾ ಪಾದುಕಾ ದಿಗ್ವಿಜಯ ಪಾದಯಾತ್ರೆ ಭಾನುವಾರ ಸಂಪನ್ನಗೊಂಡಿತು. ಕಾಶೀಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಶ್ರದ್ಧೆಯಿಂದ ಭಾಗವಹಿಸಿದರು.
ಕೊಂಚಾಡಿಯ ಕಾಶೀಮಠ ಸಂಸ್ಥಾನದ ಶಾಖಾಮಠದಿಂದ ಹೊರಟ ಮೆರವಣಿಗೆ ಯೆಯ್ಯಾಡಿ, ಕೆಪಿಟಿ, ಬಿಜೈ, ಕೆಎಸ್‌ಆರ್‌ಟಿಸಿ, ಲಾಲ್‌ಬಾಗ್, ಎಂ.ಜಿ.ರಸ್ತೆ, ಪಿ.ವಿ.ಎಸ್ ಜಂಕ್ಷನ್, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವೃತ್ತವನ್ನು ತಲುಪಿತು. ಕೆನರಾ ಹೈಸ್ಕೂಲ್‌ನಲ್ಲಿ ಭಕ್ತರಿಗೆ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಅಲ್ಲಿಂದ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪಾದಯಾತ್ರೆಯಲ್ಲಿ ಸೇರಿಕೊಂಡರು. ಬಳಿಕ ಡೊಂಗರಕೇರಿ, ನ್ಯೂಚಿತ್ರಾ, ಶ್ರೀನಿವಾಸ ಚಿತ್ರಮಂದಿರ, ಸ್ವದೇಶಿ ಸ್ಟೋರ್ ಮೂಲಕ ಮೆರವಣಿಗೆ ರಥಬೀದಿಯ ವೆಂಕಟರಮಣ ದೇವಸ್ಥಾನವನ್ನು ತಲುಪಿತು.
ಮೆರವಣಿಗೆಯುದ್ದಕ್ಕೂ ಭಜನೆ, ಜಯಕಾರ, ವ್ಯಾಸಧ್ವಜಗಳೊಂದಿಗೆ ಭಕ್ತರು ಸಂಭ್ರಮಿಸಿದರು. ಕುಣಿತ ಭಜನೆ ತಂಡಗಳು ಗಮನ ಸೆಳೆದವು. ಬ್ರಹ್ಮ ವಿಷ್ಣು ಮಹೇಶ್ವರ, ಶ್ರೀಕೃಷ್ಣ–ರಾಧೆಯರ ವೇಷಧಾರಿಗಳೂ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಟ್ಯಾಬ್ಲೊಗಳು, ಗಾರುಡಿ ಬೊಂಬೆಗಳು, ಚೆಂಡೆ, ವಾದ್ಯಗಳು ಮೆರವಣಿಗೆಗೆ ಮೆರುಗು ತುಂಬಿದವು.
ವೆಂಕಟರಮಣ ದೇವಸ್ಥಾನದ ಬಳಿ ನಡೆದ ಮಂಗಳೋತ್ಸವದ ಸಭಾ ಕಾರ್ಯಕ್ರಮ ನೆರವೇರಿತು