
ಪ್ರಜಾವಾಣಿ ವಾರ್ತೆ
ಬಂಟ್ವಾಳ: ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದವರಲ್ಲಿ ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ ಭಟ್ (24) ಕೂಡಾ ಸೇರಿದ್ದಾರೆ.
ಇಲ್ಲಿನ ಕನಪಾಡಿ ನಿವಾಸಿ ರಾಮಕೃಷ್ಣ ರಾವ್ ಮತ್ತು ರೇಣುಕಾ ದಂಪತಿ ಪುತ್ರ ರವಿಕಿರಣ್ ಭಟ್ ಕಳೆದ ಎರಡು ವರ್ಷಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ಲಾಕ್‌ಡೌನ್ ಆಗಿದ್ದರಿಂದ ಇವರು ಹುಟ್ಟೂರಿಗೆ ಬಂದಿದ್ದರು. ಬಳಿಕ ಮೇನಲ್ಲಿ ಮತ್ತೆ ತಲಕಾವೇರಿಗೆ ವಾಪಸಾಗಿದ್ದರು.
ಶಾಸಕ ರಾಜೇಶ ನಾಯ್ಕ್ ಗುರುವಾರ ಸಂಜೆ ಭಟ್ ಅವರ ಮನೆಗೆ ತೆರಳಿ, ಮನೆಯವರಿಗೆ ಧೈರ್ಯ ತುಂಬಿದರು. ಕೆ.ಜೆ.ಬೋಪಯ್ಯ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.