ಉಜಿರೆ (ದಕ್ಷಿಣ ಕನ್ನಡ): ತೌತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳ–ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಬಳಿ ಹಳ್ಳದಲ್ಲಿ ಶನಿವಾರ ಅಪರೂಪದ ನೀರುನಾಯಿಗಳ ಹಿಂಡು ಪ್ರತ್ಯಕ್ಷವಾಗಿದೆ.
‘ಕಳೆದ ಅಕ್ಟೋಬರ್‌ನಲ್ಲಿ ಹಳ್ಳದಲ್ಲಿ ರಾತ್ರಿಹೊತ್ತು ನೀರುನಾಯಿಗಳ ಹಿಂಡು ಪತ್ತೆಯಾಗಿತ್ತು. ಇದೀಗ ಹಗಲಿನಲ್ಲಿ 25ಕ್ಕಿಂತ ಅಧಿಕ ನೀರುನಾಯಿಗಳು ಫಲ್ಗುಣಿ ನದಿಯ ಸಂಪರ್ಕದ ಹಳ್ಳದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ’ ಎಂದು ಸ್ಥಳೀಯರಾದ ಕುಬಳಬೆಟ್ಟು ಗುತ್ತು ನಿವಾಸಿ ಸಂಪತ್ ಕೊಂಬ ಹೇಳಿದ್ದಾರೆ.
ಹಳ್ಳದಲ್ಲಿ ಪತ್ತೆಯಾದ ನೀರು ನಾಯಿಗಳ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.