ಬೆಳ್ತಂಗಡಿ: ‘ಸಮಾಜದಲ್ಲಿ ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅರ್ಹತೆಯ ಆಧಾರದಲ್ಲಿ ಅವರು ಸರ್ಕಾರಿ ವೃತ್ತಿಗೆ ನೇಮಕವಾಗುತ್ತಾರೆ. ಶಿಕ್ಷಕರ ಭಡ್ತಿಗಾಗಿ ಪರೀಕ್ಷೆ ಮಾಡುವುದು ಅರ್ಥವಿಲ್ಲದ ನಡೆಯಾಗಿದ್ದು, ಅದನ್ನು ವಿರೋಧಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ನೆನಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಬೆಳ್ತಂಗಡಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಶಸ್ತಿಗಳು ಶ್ರಮ, ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ. ಶಿಕ್ಷಕರು ಸಮಸ್ಯೆಗಳ ಮಧ್ಯೆಯೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ರಾಜ್ಯವನ್ನು ಶಾಂತಿಯ ತೋಟ ಮಾಡುವಲ್ಲಿ ಶ್ರಮವನ್ನು ವಿನಿಯೋಗ ಮಾಡುವ ಶಿಕ್ಷಕರಿಗೆ ನೆಮ್ಮದಿ ಹಾಗೂ ಸೌಲಭ್ಯ ನೀಡಬೇಕಾದುದು ಸರ್ಕಾರದ ಕರ್ತವ್ಯವಾಗಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿ, ‘ಉಳ್ಳವರು ಮತ್ತು ಶಿಕ್ಷಕರು ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತೇವೆಯೇ ಎಂಬ ವಿಮರ್ಶೆ ಮಾಡಬೇಕಾಗಿದೆ. ಆರ್ಥಿಕವಾಗಿ ಮೇಲ್ವರ್ಗದ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಕಾಣಲು ಸಾಧ್ಯವಿಲ್ಲ. ಶಾಲೆ, ಶಿಕ್ಷಕ, ಸಂಸ್ಕಾರ ಇವುಗಳ ಮಧ್ಯೆ ಇರುವ ಸಂಬಂಧ ದೂರವಾಗಿದೆ. ಮನೆಯಲ್ಲಿ ಭಾಷೆಯ ಹೆಸರಿನಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ, ‘ನಿವೃತ್ತಿಗೆ ಸಮಾನವಾಗಿ ನೇಮಕಾತಿ ಆಗುತ್ತಿಲ್ಲ. ನಲಿಕಲಿ ಶಿಕ್ಷಣ ವ್ಯವಸ್ಥೆ ದೂರವಾಗಿ ಪ್ರತಿ ತರಗತಿಗೆ ಓರ್ವ ಶಿಕ್ಷಕರನ್ನು ನೇಮಕ ಮಾಡಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ನಾಲ್ಕು ಕೆಪಿಎಸ್ ಶಾಲೆಗಳನ್ನು ನೀಡುತ್ತಿರುವ ಶಿಕ್ಷಣ ಸಚಿವರ ಕಾರ್ಯ ಶ್ಲಾಘನೀಯ’ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜೇಶ್ವರಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯಾನಂದ ಸುವರ್ಣ, ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಜ್ಞಾನೇಶ್, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಭುವನೇಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಮನೋರಮಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಜ್ ಜೈನ್, ಅಭಿವೃದ್ಧಿ ವಿಭಾಗದ ಉಪ ನಿರ್ದೇಶಕ ಸದಾನಂದ ಪೂಂಜ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಮಲ್ ನೆಲ್ಯಾಡಿ, ಸರ್ವ ಶಿಕ್ಷಣ ಅಭಿಯಾನದ ಬಸವಲಿಂಗಪ್ಪ, ತಾಲ್ಲೂಕು ಅಕ್ಷರ ದಾಸೋಹ ಯೋಜನೆಯ ನಿರ್ದೇಶಕ ರಾಜೇಂದ್ರ ಕೃಷ್ಣ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಿಲ್ಲಿ ಪಾಯಸ್, ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜು, ಚಿತ್ರಕಲಾ ಶಿಕ್ಷರಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ, ಜಿಪಿಟಿ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಕುಮಾರ್, ಪ್ರೌಢಶಾಲಾ ಸಂಘದ ಕಾರ್ಯದರ್ಶಿ ಮಾರ್ಕ್, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಪರಿವೀಕ್ಷಣಾಧಿಕಾರಿ ಸುಜಯಾ, ಗ್ರೇಡ್ 1 ಮತ್ತು ಗ್ರೇಡ್ 2 ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರಾದ ಕರುಣಾಕರ, ರವಿರಾಜ್, ಅನುದಾನಿತ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ನಾಯಕ್ ಭಾಗವಹಿಸಿದ್ದರು.
2024ನೇ ಸಾಲಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ವಿಶ್ವನಾಥ್ ಕೆ.ವಿಟ್ಲ, ಯಮುನಾ ಕೆ., ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಡ ಪ್ರೌಢಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮೋಹನ್ ಬಾಬು, ಸವಣಾಲು ಅನುದಾನಿತ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಜಿ., ಹುಣ್ಸೆಕಟ್ಟೆ ಸ.ಕಿ.ಪ್ರಾ. ಶಾಲೆ ಮುಖ್ಯ ಶಿಕ್ಷಕ ಕರಿಯಪ್ಪ ಎ.ಕೆ., ಮತ್ತು ಕಳೆದ ಸಾಲಿನಲ್ಲಿ ನಿವೃತ್ತರಾದ 29 ಶಿಕ್ಷಕರನ್ನು ಗೌರವಿಸಲಾಯಿತು.
ನಿಟ್ಟಡೆ ಶಾಲೆಯ ಆರತಿ ಕುಮಾರಿ, ನಿವೃತ್ತ ಶಿಕ್ಷಕಿ ರಾಜಶ್ರೀ ಮಾತನಾಡಿದರು.
ಬಿ.ರಾಜಶೇಖರ ಆಜ್ರಿ ದತ್ತಿ ನಿಧಿ ಸಮರ್ಪಣೆ ಮಾಡಿದರು.
ಅನಸೂಯ ಪಾಟಕ್ ಮತ್ತು ಬಳಗದವರು ನಾಡಗೀತೆ ಹಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಸ್.ಶಶಿಧರ್ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರ ದಿನಾಚರಣೆಯ ನೋಡಲ್ ಅಧಿಕಾರಿ ಲಕ್ಷ್ಮೀನಾರಾಯಣ ಸಂದೇಶ ವಾಚಿಸಿದರು. ಸರ್ಕಾರಿ ಪ್ರೌಢಶಾಲೆ ಗೇರುಕಟ್ಟೆಯ ಶಿಕ್ಷಕ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ವಂದಿಸಿದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು:
ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಪಾಂಡೇಶ್ವರ ಶಾಲೆಯ ಶಾಲಿನಿ ಎಚ್.ಕೆ. ತಿಪ್ಪಬೆಟ್ಟು ಶಾಲೆಯ ವೀಣಾ ಮೇರಿ ರೇಗೊ ಮೂಡುಬಿದಿರೆ ಮಾರ್ಪಾಡಿ ನಡ್ಯೋಡಿ ಶಾಲೆಯ ಉಷಾಲತಾ ಹೆಗ್ಡೆ ಬಂಟ್ವಾಳ ಪಡೂರು ದೇವಸ್ಯ ಶಾಲೆಯ ಶಾಂತಿ ಲೀನಾ ಸುರ್ಯ ಶಾಲೆಯ ಜಯಾ ಕೆ. ಪುತ್ತೂರು ಅರೆಡಿ ಶಾಲೆಯ ಜಗನ್ನಾಥ ಎಸ್. ಅಮೈ ಸುಳ್ಯ ಬೆಂಡೋಡಿ ಶಾಲೆಯ ಲಲಿತಾ ಕುಮಾರಿ ಎಸ್.
ಹಿರಿಯ ಪ್ರಾಥಮಿಕ ವಿಭಾಗ: ಬೈಕಂಪಾಡಿ ಶಾಲೆಯ ಜಯಲಕ್ಷ್ಮಿ ಸೋಮೇಶ್ವರ ಉಚ್ಚಿಲಗುಡ್ಡ ಶಾಲೆಯ ಚಂದ್ರಶೇಖರ ಸಿ.ಎಚ್. ಮೂಡುಬಿದಿರೆ ನೆಲ್ಲಿಕಾರು ಶಾಲೆಯ ಹರೀಶ ಕೆ.ಎಂ. ಬಂಟ್ವಾಳ ನೀರ್ಕಜೆ ಕೇವು ಶಾಲೆಯ ಬಾಬು ನಾಯ್ಕ ಬಿ. ಬೆಳ್ತಂಗಡಿ ನಿಟ್ಟಡೆ ಶಾಲೆಯ ಆರತಿ ಕುಮಾರಿ ಪುತ್ತೂರು ವೀರಮಂಗಲ ಶಾಂತಿಗೋಡು ಶಾಲೆಯ ತಾರಾನಾಥ ಸುಳ್ಯ ದೇವಚಳ್ಳ ಶ್ರೀಧರ ಗೌಡ.
ಪ್ರೌಢಶಾಲಾ ವಿಭಾಗ: ಮಂಗಳೂರು ಲೇಡಿಹಿಲ್ ವಿಕ್ಟೋರಿಯ ಪ್ರೌಢಶಾಲೆಯ ವಿಲ್ಮಾ ಪಿ.ಲೋಬೊ ಮಂಗಳೂರು ಪೆರ್ಮನ್ನೂರು ಶಾಲೆಯ ದುರ್ಗಾಲತಾ ಮೂಡುಬಿದಿರೆ ಪ್ರಾಂತ್ಯ ಶಾಲೆಯ ರತ್ನಾವತಿ ಆಚಾರ್ ಕೆ. ಬಂಟ್ವಾಳ ಸರಪಾಡಿ ಶಾಲೆಯ ಆದಂ ಬೆಳ್ತಂಗಡಿ ಪೆರ್ಲ ಬೈಪಾಡಿ ಶಾಲೆಯ ವಿಜಯ ಕುಮಾರ್ ಎಂ. ಸುಳ್ಯ ಎಣ್ಮೂರು ಶಾಲೆಯ ಮೋಹನ ಎ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ನೆಮ್ಮದಿಯಾಗಿ ಕೆಲಸ ಮಾಡಲು ಬಿಡದ ಅಧಿಕಾರಿಗಳು’:
‘ಶಿಕ್ಷಕರನ್ನು ನೆಮ್ಮದಿಯಿಂದ ಕೆಲಸ ಮಾಡಲು ಅಧಿಕಾರಿಗಳು ಬಿಡುತ್ತಿಲ್ಲ. ಶಿಕ್ಷಕರು ಅಧಿಕಾರಿಗಳ ಹೆದರಿಕೆ ಬೆದರಿಕೆಗೆ ಒಳಗಾಗಬಾರದು. ಎನ್‌ಪಿಎಸ್ ಶಿಕ್ಷಕರ ಬೇಡಿಕೆಯ ಒಪಿಎಸ್ ಸವಲತ್ತು ನೀಡದೆ ಇರುವುದು ಅತಿಥಿ ಶಿಕ್ಷಕರಿಗೆ ತಿಂಗಳಿಗೆ ಸರಿಯಾಗಿ ಸಂಬಳ ನೀಡದೆ ಇರುವುದು ಶಿಕ್ಷಕ ವೃತ್ತಿಗೆ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.