
FIR
ಮಂಗಳೂರು: ಎಪಿಕೆ ಕೊಂಡಿಯನ್ನು ಹೊಂದಿದ್ದ ಫೈಲ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿದ ಬಳಿಕ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 10 ಲಕ್ಷ ನಗದು ಅಕ್ರಮವಾಗಿ ಕಡಿತವಾದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನನಗೆ ಗುರುವಾರ ಸಂಜೆ ಮೊಬೈಲ್ ಸಂಖ್ಯೆಯೊಂದರಿಂದ ಎಪಿಕೆ ಕೊಂಡಿ ಹೊಂದಿದ್ದ ಸಂದೇಶ ಬಂದಿತ್ತು. ಅದನ್ನು ಡೌನ್ಲೋಡ್ ಮಾಡಿ ನನ್ನ ಮೊಬೈಲ್ ನಂಬರ್ ನಮೂದಿಸಿದ್ದೆ. ನಂತರ ವ್ಯಕ್ತಿಯೊಬ್ಬರು ಇನ್ನೊಂದು ನಂಬರಿನಿಂದ ಪದೇ ಪದೇ ಕರೆ ಮಾಡಿ ಕೆವೈಸಿ ಮಾಹಿತಿ ಕೇಳಿದ್ದರು. ಆ ಮಾಹಿತಿಯನ್ನು ನಾನು ನೀಡಿಲ್ಲ. ಆದರೆ, ಶುಕ್ರವಾರ ರಾತ್ರಿ ನನ್ನ ಬ್ಯಾಂಕ್ ಖಾತೆಯೊಂದರಿಂದ ಒಟ್ಟು ₹ 10 ಲಕ್ಷ ಹಂತ ಹಂತವಾಗಿ ಕಡಿತಗೊಂಡ ಬಗ್ಗೆ ಸಂದೇಶಗಳು ಬಂದಿವೆ. ಎಪಿಕೆ ಕೊಂಡಿಯನ್ನು ಬಳಸಿ ನನ್ನ ವೈಯಕ್ತಿಕ ಮಾಹಿತಿಯನ್ನು ಕದ್ದು ವಂಚನೆ ಮಾಡಲಾಗಿದೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.