ADVERTISEMENT

ಕುಕ್ಕೆ: ಪುರುಷರಾಯ ಬೆಟ್ಟದಲ್ಲಿ ದೈವಗಳ ನೇಮೋತ್ಸವ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 11:33 IST
Last Updated 4 ಜೂನ್ 2025, 11:33 IST
ಪುರುಷರಾಯ ಬೆಟ್ಟದಲ್ಲಿ ಹೊಸಳಿಗಮ್ಮ ದೈವದ ನೇಮೋತ್ಸವ ನಡೆಯಿತು
ಪುರುಷರಾಯ ಬೆಟ್ಟದಲ್ಲಿ ಹೊಸಳಿಗಮ್ಮ ದೈವದ ನೇಮೋತ್ಸವ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದ ಪುರುಷರಾಯ ಬೆಟ್ಟದಲ್ಲಿನ ಹೊಸಳಿಗಮ್ಮ, ಪುರುಷರಾಯ ಮತ್ತು ಇತರ ದೈವಗಳ ನೇಮೋತ್ಸವ ನಡೆಯಿತು.

ಕಾಜುಕುಜುಂಬ, ಕೆಂಚಿರಾಯ ದೈವಗಳ ನೇಮ ನಡಾವಳಿಗಳು ಮತ್ತು ನರ್ತನ ಸೇವೆಗಳೂ ನಡೆದವು. ಹೊಸಳಿಗಮ್ಮ, ಪುರುಷರಾಯ, ಪಂಜುರ್ಲಿ ದೈವಗಳ ನೇಮ, ನಡಾವಳಿ, ನರ್ತನ ಸೇವೆ ನಡೆದವು. ಪ್ರಸಾದ ವಿತರಣೆ ನೆರವೇರಿತು. ಪುರೋಹಿತ ನಾರಾಯಣ ಭಟ್ ವಿಧಿವಿಧಾನ ನೆರವೇರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ದೇವಳದ ನಾಗೇಶ್ ಎ.ವಿ., ಲೋಕೇಶ್ ಎಂ.ಆರ್., ಎನ್.ಸಿ.ಲಕ್ಷ್ಮಣ, ದೈವದ ಪೂಜಾರಿ ದಯಾನಂದ ದೋಣಿಮನೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.