ADVERTISEMENT

ದೈನಿಕ, ಸಾಪ್ತಾಹಿಕ ರೈಲು ಸೇವೆ

ಜೂನ್ 1ರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚಾರ

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:27 IST
Last Updated 21 ಮೇ 2020, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ವಿಶೇಷ ರೈಲುಗಳ ಸಂಚಾರವನ್ನು ಜೂನ್‌ 1 ರಿಂದ ಆರಂಭಿಸಲಾಗುತ್ತಿದೆ. ಆದರೆ, ಈ ರೈಲುಗಳು ಜೂನ್ 10 ರಿಂದ ಕೊಂಕಣ ರೈಲ್ವೆ ಮುಂಗಾರು ವೇಳಾಪಟ್ಟಿಯಂತೆ ಸಂಚಾರ ಮಾಡಲಿವೆ.

ತಿರುವನಂತಪುರ ಸೆಂಟ್ರಲ್‌–ಮುಂಬೈ ಲೋಕಮಾನ್ಯ ತಿಲಕ (06346) ದೈನಿಕ ವಿಶೇಷ ರೈಲು ಬೆಳಿಗ್ಗೆ 9.30ಕ್ಕೆ ತಿರುವನಂತಪುರ ಸೆಂಟ್ರಲ್‌ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಸಂಜೆ 5.45 ಕ್ಕೆ ಮುಂಬೈ ಲೋಕಮಾನ್ಯ ತಿಲಕ್‌ ನಿಲ್ದಾಣವನ್ನು ತಲುಪಲಿದೆ. ಮುಂಬೈ ಲೋಕಮಾನ್ಯ ತಿಲಕ– ತಿರುವನಂತಪುರ ಸೆಂಟ್ರಲ್‌ (06345) ದೈನಿಕ ವಿಶೇಷ ರೈಲು, ಬೆಳಿಗ್ಗೆ 11.40ಕ್ಕೆ ಮುಂಬೈ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಸಂಜೆ 6.25 ಕ್ಕೆ ತಿರುವನಂತಪುರ ಸೆಂಟ್ರಲ್‌ ನಿಲ್ದಾಣಕ್ಕೆ ಬರಲಿದೆ.

ಎರ್ನಾಕುಲಂ–ನಿಜಾಮುದ್ದೀನ್ ಸೂಪರ್‌ಫಾಸ್ಟ್‌ (ರೈ.ಸಂ. 02617) ದೈನಿಕ ರೈಲು ಮಧ್ಯಾಹ್ನ 11.15ಕ್ಕೆ ಎರ್ನಾಕುಲಂ ಜಂಕ್ಷನ್‌ ನಿಲ್ದಾಣವನ್ನು ಬಿಡಲಿದ್ದು, ಮೂರನೇ ದಿನ ಮಧ್ಯಾಹ್ನ 1.15ಕ್ಕೆ ನಿಜಾಮುದ್ದೀನ್‌ ತಲುಪಲಿದೆ. ನಿಜಾಮುದ್ದೀನ್‌–ಎರ್ನಾಕುಲಂ ಜಂಕ್ಷನ್‌ (ರೈ.ಸಂ. 02618) ದೈನಿಕ ರೈಲು, ಬೆಳಿಗ್ಗೆ 9.15 ಕ್ಕೆ ನಿಜಾಮುದ್ದೀನ್‌ ನಿಲ್ದಾಣದಿಂದ ಹೊರಡಲಿದ್ದು, ಮೂರನೇ ದಿನ ಮಧ್ಯಾಹ್ನ 12.15 ಕ್ಕೆ ಎರ್ನಾಕುಲಂಗೆ ಬರಲಿದೆ.

ADVERTISEMENT

ನಿಜಾಮುದ್ದೀನ್‌–ಎರ್ನಾಕುಲಂ ಜಂಕ್ಷನ್‌ ಸಾಪ್ರಾಹಿಕ (ರೈ.ಸಂ. 02284) ದುರಂತೋ ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ ರಾತ್ರಿ 9.15ಕ್ಕೆ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡಲಿದ್ದು, ಮೂರನೇ ದಿನ ಸಂಜೆ 4.10ಕ್ಕೆ ಎರ್ನಾಕುಲಂ ನಿಲ್ದಾಣವನ್ನು ತಲುಪಲಿದೆ. ಈ ರೈಲು ಜೂನ್‌ 6 ರಿಂದ ಸಂಚಾರ ಆರಂಭಿಸಲಿದೆ. ಎರ್ನಾಕುಲಂ ಜಂಕ್ಷನ್‌–ನಿಜಾಮುದ್ದೀನ್‌ ಸಾಪ್ತಾಹಿಕ (ರೈ.ಸಂ. 02283) ದುರಂತೋ ಎಕ್ಸ್‌ಪ್ರೆಸ್ ರೈಲು ಜೂನ್‌ 9 ರಿಂದ ಪ್ರತಿ ಮಂಗಳವಾರ ರಾತ್ರಿ 11.25ಕ್ಕೆ ಎರ್ನಾಕುಲಂ ಜಂಕ್ಷನ್‌ನಿಂದ ಹೊರಡಲಿದ್ದು, ಮೂರನೇ ದಿನ ಸಂಜೆ 7.40ಕ್ಕೆ ನಿಜಾಮುದ್ದೀನ್ ನಿಲ್ದಾಣ ತಲುಪಲಿದೆ ಎಂದು ದಕ್ಷಿಣ ರೈಲ್ವೆ ಪಾಲ್ಘಾಟ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.