ADVERTISEMENT

‘ನಾರಾಯಣ ಹಾಸ್ಯಗಾರರ ತಪಸ್ಸು ಕಲಾರಂಗಕ್ಕೆ ಅಧಾರ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 6:16 IST
Last Updated 25 ಜೂನ್ 2020, 6:16 IST
ಮಂಗಳೂರಿನ ಕಲ್ಕೂರು ಪ್ರತಿಷ್ಠಾನದಲ್ಲಿ ಕರ್ಕಿ ನಾರಾಯಣ ಹಾಸ್ಯಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಮಂಗಳೂರಿನ ಕಲ್ಕೂರು ಪ್ರತಿಷ್ಠಾನದಲ್ಲಿ ಕರ್ಕಿ ನಾರಾಯಣ ಹಾಸ್ಯಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು   

ಮಂಗಳೂರು: ‘ಯಕ್ಷಗಾನ ಕಲೆಯನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿದ ಕರ್ಕಿ ಮನೆತನದ ನಾರಾಯಣ ಹಾಸ್ಯಗಾರರು, ಈಗ ನಮ್ಮೊಂದಿಗಿಲ್ಲ. ಆದರೆ ಅವರು ತಮ್ಮ ಪ್ರದರ್ಶನದ ಮೂಲಕ ಆಳವಾದ ಛಾಪನ್ನು ಮೂಡಿಸಿದ್ದಾರೆ’ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಕಲ್ಕೂರ ಪ್ರತಿಷ್ಠಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನವರಸಗಳನ್ನು ಮುಖ, ಕಣ್ಣುಗಳ ಮೂಲಕ ಅಭಿವ್ಯಕ್ತಿಗೊಳಿಸುವುದರಲ್ಲಿ ನಾರಾಯಣ ಹಾಸ್ಯಗಾರರು ಸಿದ್ಧಹಸ್ತರು. ಅವರ ಬದುಕು, ಕಲಾ ಪ್ರಾವೀಣ್ಯಗಳು ಕಲಾರಂಗಕ್ಕೆ ಅಧಾರಗಳು ಎಂದರು.

ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಕರ್ಕಿ ಮನೆತನದ ಕಲಾ ಪರಿಯನ್ನು ತಿಳಿಸಿ, ನಾರಾಯಣ ಹಾಸ್ಯಗಾರರ ಕಲೆ ಮತ್ತು ವ್ಯಕ್ತಿತ್ವಗಳನ್ನು ನೆನಪಿಸಿದರು.

ADVERTISEMENT

ಕರ್ಕಿ ಹಾಸ್ಯಗಾರರ ಒಡನಾಟವನ್ನು ಜಿ.ಕೆ. ಭಟ್ ಸೇರಾಜೆ, ಸೀತಾರಾಮ ಭಟ್ ಸೇರಾಜೆ ವಿವರಿಸಿದರು. ಸಾಹಿತಿಗಳಾದ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಮಾತನಾಡಿದರು. ಪುಷ್ಪನಮನ, ಗೀತನಮನ ಅರ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.