ADVERTISEMENT

ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ಪುನಶ್ಚೇತನಕ್ಕಾಗಿ ಟ್ವಿಟರ್‌ನಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 11:58 IST
Last Updated 3 ಅಕ್ಟೋಬರ್ 2020, 11:58 IST
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ    

ಮಂಗಳೂರು: ತಾಲ್ಲೂಕಿನ ಬಜ್ಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯು ವಿಮಾನ ನಿಲ್ದಾಣದ ಪುನಶ್ಚೇತನಕ್ಕೆ ಆಗ್ರಹಿಸಿ ಜೈ ತುಳುನಾಡ್, ತುಳುವಾಸ್ ಕೌನ್ಸಿಲ್ ಮತ್ತಿತರ ಸಮಾನ ಮನಸ್ಕ ಸಂಘಟನೆಗಳು #FlyFromIXE ಟ್ಯಾಗ್ ಅಡಿಯಲ್ಲಿ ಇದೇ 4ರಂದು ಟ್ವಿಟರ್ ಅಭಿಯಾನ ಹಮ್ಮಿಕೊಂಡಿವೆ.

ಉಡಾನ್ ಯೋಜನೆಗೆ ಮಂಗಳೂರು ವಿಮಾನ ನಿಲ್ದಾಣವನ್ನು ಸೇರಿಸಿ ಹೆಚ್ಚೆಚ್ಚು ಪ್ರಾದೇಶಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಬೇಕು. ಇಲ್ಲಿಂದ ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಹೆಚ್ಚಿಸಬೇಕು. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ, ಪ್ರಾಧಿಕಾರಗಳ, ವಿಮಾನಯಾನ ಸಂಸ್ಥೆಗಳ, ಸರ್ಕಾರದ ಗಮನ ಸೆಳೆಯಲು ಅಭಿಯಾನ ಆಯೋಜಿಸಲಾಗಿದೆ.

ಕಣ್ಣೂರು ವಿಮಾನ ನಿಲ್ದಾಣ ನಿರ್ಮಾಣಗೊಂಡ ಬಳಿಕ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಅಂತರ ರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸಲಾಗುತ್ತಿದೆ. ಮೂಲ ಸೌಕರ್ಯ ಹಾಗೂ ಸ್ಥಳೀಯ ಬೇಡಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಉಡಾನ್ ವ್ಯಾಪ್ತಿಗೂ ಸೇರ್ಪಡೆ ಮಾಡಿಲ್ಲ. ಇದರಿಂದಾಗಿ ಮಂಗಳೂರಿನ ಜನರೂ ಬೇರೆ ವಿಮಾನ ನಿಲ್ದಾಣ ಅವಲಂಬಿಸುವ ಸ್ಥಿತಿ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.