ADVERTISEMENT

ನಿಟ್ಟೆ: ತುಳು ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 3:59 IST
Last Updated 1 ಅಕ್ಟೋಬರ್ 2021, 3:59 IST

ಮಂಗಳೂರು:ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಅ.2ರಂದು ಬೆಳಿಗ್ಗೆ 10ಕ್ಕೆ ‘ತುಳು ದಿನ’ ಆಚರಣೆ ನಡೆಯಲಿದೆ.

ಪರಿಷ್ಕೃತ ತುಳು ಜ್ಞಾತಿಪದ ಸಂಚಯದ ಡಿಜಿಟಲ್ ಆವೃತ್ತಿಯನ್ನು ಕುಲಾಧಿಕಪತಿ ಎನ್‌.ವಿನಯ ಹೆಗ್ಡೆ ಲೋಕಾರ್ಪಣೆ ಮಾಡುವರು.

ಕುಲಪತಿ ಡಾ.ಸತೀಶ್‌ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಮಣಿಪಾಲದ ಗಾಂಧಿಯನ್ ಸೆಂಟರ್‌ ಫಾರ್ ಫಿಲಾಸಾಫಿಕಲ್ ಆರ್ಟ್ಸ್‌ ನಿರ್ದೇಶಕ ವರದೇಶ ಹಿರೇಗಂಗೆ ಗಾಂಧಿ ಸ್ಮರಣೆ ಮಾಡುವರು. ಸಹ ಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ವಿಶ್ರಾಂತ ಕುಲಪತಿ ಡಾ.ಎಸ್. ರಮಾನಂದ ಶೆಟ್ಟಿ, ಅಲ್ ಅಮೆರಿಕಾ ತುಳು ಅಸೋಸಿಯೇಶನ್ ಅಧ್ಯಕ್ಷ ಭಾಸ್ಕರ ಶೇರಿಗಾರ್‌ ಮಾಳ ಪಾಲ್ಗೊಳ್ಳುವರು.

ADVERTISEMENT

ಆಸಕ್ತರು ಯೂ ಟ್ಯೂಬ್ ಲಿಂಕ್ https://tinyurl.com/nittetube ಮೂಲಕ ವೀಕ್ಷಿಸಬಹುದು ಎಂದು ಕಾರ್ಯಕ್ರಮ ಸಂಯೋಜಕಿ ಡಾ.ಸಾಯಿಗೀತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.