
ಕಡಬ (ಉಪ್ಪಿನಂಗಡಿ): ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಜಿರೆಗೆ ಬಂದ ಸಂದರ್ಭದಲ್ಲೂ ಮನವಿ ಮಾಡಲಾಗಿತ್ತು. ಬೇರೆ ರಾಜ್ಯಗಳಿಂದಲೂ ಅಲ್ಲಿನ ಭಾಷೆಗಳನ್ನು 8ನೇ ಪರಿಚ್ಚೇದಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಬೇಡಿಕೆ ಬಂದಿದೆ. ಮತ್ತೊಮ್ಮೆ ಪ್ರಸ್ತಾಪ ಮಾಡುವುದಾಗಿ ರಾಜ್ಯಸಭ ಸದಸ್ಯ, ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳು ಕೂಟ ರಾಮಕುಂಜ ಹಾಗೂ ತೆಗ್ರ್ ತುಳುಕೂಟ ನೂಜಿಬಾಳ್ತಿಲದ ಆಶ್ರಯದಲ್ಲಿ ಕಡಬ ತಾಲ್ಲೂಕು ಕಡೀರ ತುಳು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮಿ ಮಾತನಾಡಿ ತುಳು ಭಾಷೆಗೆ ದೊಡ್ಡ ಸ್ಥಾನಮಾನ ಲಭಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಹರಿಸಬೇಕು ಎಂದರು.
ಒಡಿಯೂರು ಗುರುದೇವಾನಂದ ಸ್ವಾಮಿ, ಭಾಷೆ, ಸಂಸ್ಕೃತಿಗೆ ಪೂರಕವಾಗಿ ಬದುಕು ಸಾಗಬೇಕು ಎಂದರು. ಸಮ್ಮೇಳನದ ಅಧ್ಯಕ್ಷ ಕೆ.ಸೇಸಪ್ಪ ರೈ ರಾಮಕುಂಜ ಅಧ್ಯಕ್ಷತೆ ವಹಿಸಿದ್ದರು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನ, ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕಡಬ ತಾಲ್ಲೂಕು ಕಡೀರ ತುಳು ಸಮ್ಮೇಳನದ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ ಮಾತನಾಡಿದರು.
ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ರೆಂಜಿಲಾಡಿಬೂಡು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ, ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಕಲಾಯಿಗುತ್ತು, ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಅಧ್ಯಕ್ಷ ಶರತ್ ನಂದುಗುರಿ, ಉಪ್ಪಿನಂಗಡಿಯ ವೈದ್ಯರಾದ ಡಾ.ಮರಾಜಾರಾಮ್, ಡಾ. ನಿರಂಜನ್ ರೈ, ಕಾಣಿಯೂರು ಪ್ರಗತಿ ವಿದ್ಯಾಲಯದ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲ್ಲೂಕು ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರುಣಾಕರ ಗೋಗಟೆ ವಾಳ್ಯ, ಟಿ. ನಾರಾಯಣ ಭಟ್ ರಾಮಕುಂಜ, ಸತೀಶ್ ಭಟ್ ಬಿಳಿನೆಲೆ ಇದ್ದರು.
ಶಿವರಾಮ ಶೆಟ್ಟಿ ಕೇಪು ಸ್ವಾಗತಿಸಿದರು. ಗಿರಿಶಂಕರ ಸುಲಾಯ ವಂದಿಸಿದರು. ಚೇತನ್ ಆನೆಗುಂಡಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.