
ಪ್ರಜಾವಾಣಿ ವಾರ್ತೆ
ಉಳ್ಳಾಲ: ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್‌ನಿಂದ ಕೊರಗಜ್ಜನಿಗೆ ದೊಂದಿ ಬೆಳಕಿನ ಕೋಲ ಸೇವೆ ವಿಜೃಂಭಣೆಯಿಂದ ನಡೆಯಿತು.
ಗೌರವ ಅಧ್ಯಕ್ಷ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ 11 ವರ್ಷಗಳಿಂದ ವರ್ಷಾವಧಿ ಕೋಲ ನಡೆಸುತ್ತಿದ್ದೇವೆ. ಕೊರಗಜ್ಜ ದೈವದ ದೊಂದಿ ಬೆಳಕಿನ ಕೋಲಸೇವೆ ವಿಶೇಷವಾಗಿದೆ. ಶಿವಾಜಿ ಫ್ರೆಂಡ್ಸ್ ಸುವರ್ಣ ಮಹೋತ್ಸದತ್ತ ಹೆಜ್ಜೆಇಡುತ್ತಿದೆ ಎಂದು ಹೇಳಿದರು.
ಅನ್ನಸಂತರ್ಪಣೆ ನಡೆಯಿತು.
ಪ್ರಮುಖರಾದ ಸದಾನಂದ ಒಂಬತ್ತುಕೆರೆ, ಚಂದ್ರಶೇಖರ ಉಚ್ಚಿಲ್, ಕೇಶವ ಭಟ್ನಗರ, ಸಂಘದ ಪ್ರಧಾನ ಕಾರ್ಯದರ್ಶಿ ರೋಹನ್ ತೊಕ್ಕೊಟ್ಟು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.