ADVERTISEMENT

ರಮಾನಾಥ ರೈ ವಿರುದ್ಧ ವೈಯಕ್ತಿಕ ಟೀಕೆ ಸಲ್ಲ: ಉಮೇಶ್ ದಂಡಕೇರಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 14:49 IST
Last Updated 17 ಸೆಪ್ಟೆಂಬರ್ 2022, 14:49 IST
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ದಂಡಕೇರಿ ಮಾತನಾಡಿದರು. ಶಶಿಕಲಾ ಪದ್ಮನಾಭ, ಅನಿಲ್ ಕುಮಾರ್, ಪದ್ಮನಾಭ ಕೋಟ್ಯಾನ್ ಹಾಗೂ ನೀರಜ್‌ಚಂದ್ರ ಪಾಲ್ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ದಂಡಕೇರಿ ಮಾತನಾಡಿದರು. ಶಶಿಕಲಾ ಪದ್ಮನಾಭ, ಅನಿಲ್ ಕುಮಾರ್, ಪದ್ಮನಾಭ ಕೋಟ್ಯಾನ್ ಹಾಗೂ ನೀರಜ್‌ಚಂದ್ರ ಪಾಲ್ ಇದ್ದಾರೆ   

ಮಂಗಳೂರು: ನಾರಾಯಣ ಗುರುಗಳ ವಿಷಯದಲ್ಲಿ ಗೊಂದಲದ ಹೇಳಿಕೆಗಳನ್ನು ನೀಡುತ್ತ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ರಾಜಕೀಯ ಲಾಭಕ್ಕಾಗಿ ರಮಾನಾಥ ರೈ ಅವರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ ಹೇಳಿದರು.

ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಅಪಾರ. ಕಳೆದ ಬಾರಿ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡಿ ಅವರನ್ನು ಸೋಲಿಸಲಾಯಿತು. ಈಗ ಅವರ ದೈಹಿಕ ಸ್ಥಿತಿ, ನಡೆದಾಡುವ ಭಂಗಿ ಇತ್ಯಾದಿಗಳನ್ನು ಗೇಲಿ ಮಾಡುತ್ತಿರುವುದು ಸರಿಯಲ್ಲ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಹೇಳಿದರು.

ರಾಜಕೀಯದ ಬಗ್ಗೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ. ಆದರೆ ನಾರಾಯಣ ಗುರುಗಳ ಬಗ್ಗೆ ಬಿಜೆಪಿ ಸರ್ಕಾರದ ಧೋರಣೆಯನ್ನು ಟೀಕಿಸಿದ ಕಾರಣಕ್ಕೆ ರೈ ಅವರ ತೇಜೋವಧೆ ಮಾಡುವುದು ಸರಿಯಲ್ಲ. ಕಲ್ಲಡ್ಕ ಶಾಲೆಯ ಮಧ್ಯಾಹ್ನದ ಊಟದ ವಿಷಯದಲ್ಲಿ ಸುಳ್ಳು ಸುದ್ದಿ ಹಬ್ಬಿ ರೈಯವರನ್ನು ಸೋಲಿಸಲಾಗಿತ್ತು.ಬಂಟ್ವಾಳದ ಈಗಿನ ಶಾಸಕರು ವೈಯಕ್ತಿಕವಾಗಿ ಒಳ್ಳೆಯವರು. ಆದರೆ ರೈಯವರ ಅನುಭವ ಅಪಾರ. ಮುಂದಿನ ಚುನಾವಣೆಯಲ್ಲಿ ಅವರ ಜಯ ಖಚಿತ ಎಂದು ಉಮೇಶ್‌ ಅಭಿಪ್ರಾಯಪಟ್ಟರು.

ADVERTISEMENT

ಪಾಲಿಕೆ ಸದಸ್ಯ ಅನಿಲ್ ಕುಮಾರ್, ಮುಖಂಡರಾದ ಪದ್ಮನಾಭ ಕೋಟ್ಯಾನ್, ಶಶಿಕಲಾ ಪದ್ಮನಾಭ ಹಾಗೂ ನೀರಜ್‌ಚಂದ್ರ ಪಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.