ADVERTISEMENT

ಉಪ್ಪಿನಂಗಡಿ: ಆಂಜನೇಯನಿಗೆ ಸಿಂಧೂರ ಪೂಜೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:33 IST
Last Updated 10 ಮೇ 2025, 14:33 IST
ಭಾರತೀಯ ಯೋಧರಿಗೆ ಯಶಸ್ಸು ಕೋರಿ ಉಪ್ಪಿನಂಗಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು
ಭಾರತೀಯ ಯೋಧರಿಗೆ ಯಶಸ್ಸು ಕೋರಿ ಉಪ್ಪಿನಂಗಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು   

‌ಉಪ್ಪಿನಂಗಡಿ: ಇಲ್ಲಿನ ಆಂಜನೇಯ ಸ್ವಾಮಿ ದೇವರಿಗೆ ಉಪ್ಪಿನಂಗಡಿ ಸಹಕಾರ ವ್ಯವಸಾಯಿಕ ಸಂಘದ ವತಿಯಿಂದ ಸಿಂಧೂರ ಪೂಜೆಯನ್ನು ಶನಿವಾರ ನೆರವೇರಿಸಲಾಯಿತು.

ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತಿಕಾರ ನಡೆಸಿದ ಭಾರತೀಯ ಯೋಧರಿಗೆ, ಆಡಳಿತಗಾರರಿಗೆ ರಕ್ಷಾ ಕವಚವಾಗಿ, ಪ್ರತಿ ಯತ್ನದಲ್ಲೂ ಯಶಸ್ಸು ಕೋರಿ ಭಾರತೀಯ ಸೇನೆಗೆ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷ ದಯಾನಂದ ಸರೋಳಿ, ಪ್ರಮುಖರಾದ ಸಂಜೀವ ಮಠಂದೂರು, ಮುಕುಂದ ಬಜತ್ತೂರು, ಸಂಧ್ಯಾ, ಗೀತಾ, ಸದಾನಂದ ಶೆಟ್ಟಿ, ರಾಘವ ನಾಯ್ಕ, ಶ್ರೀರಾಮ ಭಟ್ ಪಾತಾಳ, ವಸಂತ ಗೌಡ ಪಿಜಕ್ಕಳ, ಗಂಗಾಧರ ಗೌಡ ಪಿ.ಎನ್., ಸದಾನಂದ ಶೆಟ್ಟಿ, ಚಂದ್ರಶೇಖರ್ ತಾಳ್ತಜೆ, ಹರಿರಾಮಚಂದ್ರ, ಎನ್.ಉಮೇಶ್ ಶೆಣೈ, ರಾಮಚಂದ್ರ ಮಣಿಯಾಣಿ,
ರಾಜಗೋಪಾಲ ಭಟ್ ಕೈಲಾರ್, ಧರ್ಣಪ್ಪ ನಾಯ್ಕ, ಪ್ರಸಾದ್ ಭಂಡಾರಿ, ವಿದ್ಯಾಧರ ಜೈನ್, ಕೃಷ್ಣ ಶೆಣೈ, ಕೆ.ವಿ.ಪ್ರಸಾದ್, ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಶೋಭಾ, ಪುಷ್ಪರಾಜ ಶೆಟ್ಟಿ, ಪ್ರವೀಣ ಆಳ್ವ, ರವೀಶ್ ಎಚ್.ಟಿ., ಶಶಿಧರ್ ಹೆಗ್ಡೆ, ಚಂದ್ರಹಾಸ ಹೆಗ್ಡೆ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.