ADVERTISEMENT

25ರಿಂದ ವಿಎಚ್‌ಪಿ‌ ಅಂತರರಾಷ್ಷ್ರೀಯ ಬೈಠಕ್‌ 

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 7:47 IST
Last Updated 3 ಡಿಸೆಂಬರ್ 2019, 7:47 IST
   

ಮಂಗಳೂರು: ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತರರಾಷ್ಟ್ರೀಯ ಕಾರ್ಯಕಾರಿ ಸಮಿತಿ ಬೈಠಕ್ ಇದೇ 25ರಿಂದ 30ರ ವರೆಗೆ ನಗರದಲ್ಲಿ‌ ನಡೆಯಲಿದೆ ಎಂದು ಪರಿಷತ್ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ ತಿಳಿಸಿದರು.

ಸಂಘನಿಕೇತನದಲ್ಲಿ ನಡೆಯುವ ಬೈಠಕ್, ನಗರದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದ್ದು, ಅಮೆರಿಕ, ಜರ್ಮನಿ, ಮಲೇಷ್ಯಾ, ಬಾಂಗ್ಲಾದೇಶ, ನೇಪಾಳ ಸೇರಿದಂತೆ 32 ದೇಶಗಳ 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ₹50-60 ಲಕ್ಷ ವೆಚ್ಚವಾಗಲಿದೆ ಎಂದು ತಿಳಿಸಿದರು.

ರಾಮಮಂದಿರದ‌ ಟ್ರಸ್ಟ್ ರಚನೆ ಆದ ನಂತರ ಟ್ರಸ್ಟ್‌ನ ನಿರ್ಧಾರಗಳಿಗೆ ವಿಎಚ್‌ಪಿ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಪೇಜಾವರ ಸ್ವಾಮೀಜಿ, ಸಹ ಸರಕಾರ್ಯವಾಹ ಭಯ್ಯಾಜಿ ಜೋಷಿ ಅವರು ಭಾಗವಹಿಸಲಿದ್ದಾರೆ. ರಾಮಮಂದಿರಕ್ಕೆ ಸಂಬಂಧಿಸಿದಂತೆ ಯಾವ ವಿಷಯಗಳು ಚರ್ಚೆಗೆ ಬರಲಿವೆ ಎಂಬುದು ನಮಗೆ ಗೊತ್ತಿಲ್ಲ. ಅದು ಬೈಠಕ್‌ನಲ್ಲಿಯೇ ನಿರ್ಧಾರ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.