ವಿದುಷಿ ಪ್ರತಿಭಾ ಎಂ.ಎಲ್.ಸಾಮಗ ಅವರಿಗೆ ಗುರು ನಮನ ಸಲ್ಲಿಸಲಾಯಿತು
ಮಂಗಳೂರು: ನಗರದ ಸನಾತನ ನಾಟ್ಯಾಲಯ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಸನಾತನ ಗುರುಪರಂಪರ’ ಕಾರ್ಯಕ್ರಮದಲ್ಲಿ ಕಲಾ ವಿಮರ್ಶಕಿ, ವಿದುಷಿ ಪ್ರತಿಭಾ ಎಂ.ಎಲ್.ಸಾಮಗ ಅವರಿಗೆ ಗುರು ನಮನ ಸಲ್ಲಿಸಲಾಯಿತು.
ಉಳ್ಳಾಲ ನೃತ್ಯಸೌರಭ ನಾಟ್ಯಾಲಯದ ಗುರು, ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರಿಗೆ ಗುರುಪ್ರೇರಣ ಗೌರವ ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಿಭಾ ಅವರು ‘ಹಿರಿಯರ ಪರಂಪರೆ ಅನುಸರಿಸಿಕೊಂಡು ಬರುವ ಸನಾತನ ನಾಟ್ಯಾಲಯದ ನಡೆ ಶ್ಲಾಘನೀಯ. ಹೊಸ ತಲೆಮಾರಿನ ಮಕ್ಕಳು ಪ್ರತಿಭಾವಂತರಿದ್ದು ಸಾಧನೆಯ ಪಥದಲ್ಲಿ ನಡೆಯುವಂತಾಗಲಿ’ ಎಂದರು.
ಉಡುಪಿಯ ಸಮೂಹದ ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಉದ್ಯಾವರ ಮಾಧವ ಆಚಾರ್ಯ ಅವರ ಗುರುಸಂಸ್ಮರಣೆಯನ್ನು ಧಾರ್ಮಿಕ ಚಿಂತಕ ಎನ್.ಆರ್. ದಾಮೋದರ ಶರ್ಮಾ ಬಾರ್ಕೂರು ನಡೆಸಿಕೊಟ್ಟರು. ವಿದುಷಿ ಭ್ರಮರಿ ಶಿವಪ್ರಕಾಶ್ ಇದ್ದರು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿದರು.
ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಅವರ ಶಿಷ್ಯೆಯರಾದ ಸಂಜನಾ ಭರತ್, ವೈಶ್ಮ ಶೆಟ್ಟಿ, ಕಾವ್ಯಶ್ರೀ, ದೀಪ್ತಿ ಐ, ಅಂಕಿತ ಬದಿಯಡ್ಕ ಮತ್ತು ಸಾಹಿತ್ಯ ಸುರೇಶ್ ಭರತನಾಟ್ಯ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.