ADVERTISEMENT

ವಿಟ್ಲ: 132 ಮಂದಿಗೆ ಕೋವಿಡ್ ತಪಾಸಣೆ

ಪ.ಪಂ. ವ್ಯಾಪ್ತಿಯಲ್ಲಿ ಎರಡನೇ ದಿನವೂ ಮುಂದುವರಿದ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:00 IST
Last Updated 19 ಜೂನ್ 2021, 4:00 IST
ವಿಟ್ಲ ಪೇಟೆ ಪ್ರವೇಶಿಸುವ ಮಾರ್ಗದಲ್ಲಿ ವಾಹನ ತಡೆದು ಪೊಲೀಸರು ವಿಚಾರಣೆ ನಡೆಸಿದರು.
ವಿಟ್ಲ ಪೇಟೆ ಪ್ರವೇಶಿಸುವ ಮಾರ್ಗದಲ್ಲಿ ವಾಹನ ತಡೆದು ಪೊಲೀಸರು ವಿಚಾರಣೆ ನಡೆಸಿದರು.   

ವಿಟ್ಲ: ಪಟ್ಟಣ ಪಂಚಾಯಿತಿ ನಿರ್ಣಯದಂತೆ ಪೇಟೆಗೆ ಬರುವ ಜನರನ್ನು ಎರಡನೇ ದಿನವೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಶುಕ್ರವಾರ ಮತ್ತೆ 132 ಜನರ ತಪಾಸಣೆ ನಡೆಸಲಾಯಿತು.

ಕಾರ್ಯಪಡೆ ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪೂರ್ಣ ಲಾಕ್‌ಡೌನ್‌ ಮಾಡಲು ತೀರ್ಮಾನಿಸಲಾಗಿತ್ತು. ವಿನಾಕಾರಣ ಪೇಟೆಗೆ ಬರುವವರ ತಪಾಸಣೆ ನಡೆಸಲು ನಿರ್ಧರಿಸಲಾಗಿತ್ತು. ಅಂತೆಯೇ ಪೇಟೆಯನ್ನು ಪ್ರವೇಶಿಸುವ ಸ್ಥಳಗಳಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ, ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪೊಲೀಸರು ಜಂಟಿಯಾಗಿ ನಾಕಾಬಂದಿ ಅಳವಡಿಸಿದ್ದರು.

ಗುರುವಾರ ಪೇಟೆಗೆ ಬಂದಿದ್ದ 80 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇವರೆಲ್ಲರ ಗಂಟಲು ದ್ರವ ಮಾದರಿ ಸಂಗ್ರಹದ ಫಲಿತಾಂಶ ಇನ್ನಷ್ಟೇ ಬರಬೇಕಾಗಿದೆ.

ADVERTISEMENT

ಪಟ್ಟಣ ಪಂಚಾಯಿತಿ ನಿರ್ಣಯದಂತೆ ಶನಿವಾರ ಮತ್ತು ಭಾನುವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ. ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ಹಾಲಿನ ಅಂಗಡಿ ಮಾತ್ರ ತೆರೆಯಲು ಅವಕಾಶವಿದೆ. ಹಾಲಿನ ನೆಪದಲ್ಲಿ ಬೇಕರಿಗಳನ್ನು ತೆರೆಯದಂತೆ ಸೂಚನೆ ನೀಡಲಾಗಿದೆ. ಔಷಧ ಅಂಗಡಿಗಳು ಮಾತ್ರ ದಿನವಿಡೀ ತೆರೆದಿರಲಿವೆ. ತುರ್ತು ಅಗತ್ಯವಿರುವವರು, ಆಸ್ಪತ್ರೆಗೆ ಬರುವವರನ್ನು ಹೊರತುಪಡಿಸಿ, ಉಳಿದವರು ವಿನಾಕಾರಣ ತಿರುಗಾಡಬಾರದು ಎಂದುಪಟ್ಟಣ ಪಂಚಾಯಿತಿಯಿಂದ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.