ಮೂಡುಬಿದಿರೆ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಆತಿಥ್ಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ 24ನೇ ಅಂತರ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದರು.
ಏಕಾದಶಾನನ ಏಕಾಂತ ನಾಟಕ, ಮರ ಮತ್ತು ಮಗು ಕಿರುಪ್ರಹಸನ ಎರಡೂ ಪ್ರಥಮ ಪ್ರಶಸ್ತಿಯನ್ನು ಪಡೆದವು. ಜನಪದ ವಾದ್ಯಮೇಳ ದ್ವಿತೀಯ, ಜನಪದ ನೃತ್ಯದಲ್ಲಿ ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ 140ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸಿದ್ದವು.
ಶಶಿರಾಜ್ ರಾವ್ ಕಾವೂರು ರಚಿಸಿದ ಏಕಾದಶಾನನವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದರು. ಮಗು ಮತ್ತು ಮರ ಕಿರು ಪ್ರಹಸನವನ್ನು ರಾಜೇಂದ್ರ ಪ್ರಸಾದ್ ಮಂಡ್ಯ, ಪ್ರಶಾಂತ್ ಕೋಟ ನಿರ್ದೇಶಿಸಿದ್ದರು. ಸಾತ್ವಿಕ್ ನೆಲ್ಲಿತೀರ್ಥ ಮತ್ತು ಮಧುಸೂದನ (ನೀನಾಸಂ) ಕೊಡಗು ರಂಗವಿನ್ಯಾಸ ಮಾಡಿದ್ದರು. ಎರಡೂ ನಾಟಕಗಳಿಗೆ ಆಳ್ವಾಸ್ ಪಿ.ಯು ವಿದ್ಯಾರ್ಥಿ, ಸುಳ್ಯ ರಂಗಮನೆಯ ಮನುಜ ನೇಹಿಗ ಸಂಗೀತ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.