ADVERTISEMENT

ಬೆಳ್ತಂಗಡಿ | ಮನೆ ಮೇಲೆ ದಾಳಿ: ಕಾಡು ಪ್ರಾಣಿ ಮಾಂಸ, ಪರಿಕರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 6:58 IST
Last Updated 15 ಜುಲೈ 2025, 6:58 IST
ಅರಣ್ಯಾಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಕಾಡು ಪ್ರಾಣಿ ಮಾಂಸ, ಪರಿಕರ
ಅರಣ್ಯಾಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಕಾಡು ಪ್ರಾಣಿ ಮಾಂಸ, ಪರಿಕರ   

ಬೆಳ್ತಂಗಡಿ: ಕಾಡು ಪ್ರಾಣಿ ಬೇಟೆಯಾಡಿ ಮನೆಯ ಷೆಡ್‌ನಲ್ಲಿ ಮಾಂಸ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದಾಗ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ದಾಳಿ ಮಾಡಿ ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೊ ಎಂಬುವರ ಮನೆಯ ಷೆಡ್‌ನಲ್ಲಿ ಕೋವಿಯಿಂದ ಕಾಡು ಪ್ರಾಣಿ ಬೇಟೆಯಾಡಿ, ಮಾಂಸ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ನೀಡಿದ್ದಾರೆ.

ಕಾಡು ಪ್ರಾಣಿ ಸಾಗಾಟಕ್ಕೆ ಬಳಸಿದ ತಾಲ್ಲೂಕಿನ ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಎಂಬುವರಿಗೆ ಸೇರಿದ ಕಾರು, ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರೇಜ್, ಒಂದು ಕತ್ತಿ, 17 ಕೆ.ಜಿ ಕಾಡು ಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಕಾಡುಪ್ರಾಣಿ ಮಾಂಸವನ್ನು ಖಚಿತ ಪಡಿಸಿ ವರದಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಜೋಸ್ಸಿ ಅಲ್ವಿನ್ ಲೋಬೊ, ಶರತ್ ಶೆಟ್ಟಿ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ADVERTISEMENT

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್., ಡಿಆರ್‌ಎಫ್‌ಒ ಸಂದೀಪ್, ರಾಘವೇಂದ್ರ, ಕಿರಣ್ ಪಾಟೀಲ್, ಕಮಲ, ಬೀಟ್ ಫಾರೆಸ್ಟರ್ ಪಾರಶುರಾಮ್ ಮೇಟಿ, ಚಾಲಕ ದಿವಾಕರ್ ಭಾಗವಹಿಸಿದ್ದರು.

ಅರಣ್ಯಾಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡ ಕಾರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.