ADVERTISEMENT

ಮಹಿಳಾ ಸಬಲೀಕರಣವು ಪುರುಷರ ಪತನವಲ್ಲ- ತಹಶೀಲ್ದಾರ್‌ ರಶ್ಮಿ ಎಸ್.ಆರ್.

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 6:18 IST
Last Updated 9 ಮಾರ್ಚ್ 2022, 6:18 IST
ಕ್ಷೇಮ ಅಸ್ಪತ್ರೆಯಲ್ಲಿ ಜರಗಿದ ವಿಶ್ವ ಮಹಿಳೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉರ್ವ ಪೊಲೀಸ್ ಠಾಣಾಧಿಕಾರಿ ಭಾರತಿ ಮಾತನಾಡಿದರು
ಕ್ಷೇಮ ಅಸ್ಪತ್ರೆಯಲ್ಲಿ ಜರಗಿದ ವಿಶ್ವ ಮಹಿಳೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉರ್ವ ಪೊಲೀಸ್ ಠಾಣಾಧಿಕಾರಿ ಭಾರತಿ ಮಾತನಾಡಿದರು   

ಉಳ್ಳಾಲ: ಮಹಿಳೆಯರ ಸಬಲೀಕರಣ ಎಂದರೆ ಪುರುಷರ ಪತನವಲ್ಲ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.

ನಿಟ್ಟೆ ಜಸ್ಟೀಸ್‌ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ‘ವಿಮೆನ್‌ ಸ್ಕ್ರೀನಿಂಗ್ ಆಂಡ್ ವೆಲ್ನೆಸ್ ಕ್ಲಿನಿಕ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಉರ್ವ ಪೊಲೀಸ್ ಠಾಣಾಧಿಕಾರಿ ಭಾರತಿ ಮಾತನಾಡಿ, ‘ಇಂದು ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ದಿನ. ಒಂದು ಕಾಲದಲ್ಲಿ ಅವಕಾಶಗಳು ಸೀಮಿತವಾಗಿತ್ತು. ಸದ್ಯ ಅವಕಾಶಗಳು ಓವರ್ ಲೋಡ್ ಆಗಿವೆ. ಆದರೆ ಶೋಷಣೆಗಳು ಹೆಚ್ಚಿವೆ. ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಸಂಬಂಧಿತ ಪ್ರಕರಣಗಳಲ್ಲಿ ವಿದ್ಯಾವಂತ ಮಹಿಳೆಯರೇ ವಂಚನೆಗೊಳಗಾಗುತ್ತಿರುವುದು ವಿಪರ್ಯಾಸ’ ಎಂದರು.

ADVERTISEMENT

ಡೈರೆಕ್ಟರ್ ಫಾರ್ ಸೆಂಟರ್ ಫಾರ್ ಅಡ್ವಾನ್ಸ್‌ಡ್ ನ್ಯುರಾಲಾಜಿಕಲ್ ರಿಸರ್ಚ್ ಪ್ರೊ. ಲೇಖಾ ಪಂಡಿತ್ ಅಧ್ಯಕ್ಷತೆ ವಹಿಸಿದ್ದರು.

ನ್ಯೂಟ್ರೀಷಿಯನ್ ಡೈಯೆಟಿಕ್ಸ್ ವಿಭಾಗದ ಪ್ರೊ. ಪ್ರೇರಣಾ ಹೆಗ್ಡೆ ವಿಶ್ವ ಮಹಿಳಾ ದಿನಾಚರಣೆಯ ಮಾಹಿತಿ ನೀಡಿದರು.

ಶರೀರಶಾಸ್ತ್ರ ಹಾಗೂ ಲಿಂಗ ಸಂವೇದನೆ ಸಮಿತಿ ಮುಖ್ಯಸ್ಥೆ ಶೈಲಜಾ ಎಸ್.ಮೂಡಿತ್ತಾಯ, ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಸುಕನ್ಯಾ ಶೆಟ್ಟಿ, ಪ್ರೊಜೆಕ್ಷನ್ ಎನ್ಯುಟೆಕ್‍ ನಿರ್ದೇಶಕಿ ಪ್ರೊ. ಇಂದ್ರಾಣಿ ಕರುಣಾಸಾಗರ್, ಆರ್ಥಿಕ ಸಮಿತಿ ನಿರ್ದೇಶಕಿ ಸಿ.ಎ ವಿನುತಾ ಜೆ.ಶೆಟ್ಟಿ , ಸಿಬ್ಬಂದಿ ಅಭಿವೃದ್ಧಿ ಕೇಂದ್ರ ನಿರ್ದೇಶಕಿ ಸಪ್ನಾ ದೇಶಮುಖ್, ಪೀಡಿಯೋಡಾಂಟಿಕ್ಸ್ ವಿಭಾಗದ ಪ್ರೊ ಡಾ. ಅಮಿತಾ ಹೆಗ್ಡೆ, ಹ್ಯುಮ್ಯಾನಿಟಿವ್ ಇನ್ಚಾರ್ಜ್ ಪ್ರೊ. ಡಾ. ಸಾಯಿಗೀತಾ ಮುಖ್ಯ ಅತಿಥಿಗಳಾಗಿದ್ದರು.

ನರ್ಸಿಂಗ್ ಸುಪರಿಟೆಂಡೆಂಟ್ ಇನ್ಚಾರ್ಜ್ ಡೆರೆಲ್ ಅರಾನ್ಹ ಸ್ವಾಗತಿಸಿದರು. ಸುಮಿತಾ ಚೌಟ ನಿರೂಪಿಸಿದರು. ಜೇನ್ ಮರಿಯಾ ಅಲ್ಬುಕರ್ಕ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.