ADVERTISEMENT

ಕಾಸರಗೋಡು | ಯಕ್ಷಗಾನ ಗುರು ಗೋಪಾಲಕೃಷ್ಣ ಕುರುಪ್‌ ನಿಧನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 4:55 IST
Last Updated 19 ಮಾರ್ಚ್ 2025, 4:55 IST
<div class="paragraphs"><p>ಗೋಪಾಲಕೃಷ್ಣ ಕುರು</p></div>

ಗೋಪಾಲಕೃಷ್ಣ ಕುರು

   

ಮಂಗಳೂರು: ಯಕ್ಷಗಾನ ಮತ್ತು ಚೆಂಡೆ–ಮದ್ದಲೆ ಕಲಾವಿದ, ಯಕ್ಷ ಗುರು ಬಿ. ಗೋಪಾಲಕೃಷ್ಣ ಕುರುಪ್ (90) ಕಾಸರಗೊಡಿನ ನೀಲೇಶ್ವದ ಪಟ್ಟೇನದಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಕೇರಳ ಮೂಲದವರಾದ ಇವರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಶಿಶಿಲದಲ್ಲಿ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ADVERTISEMENT

ಚಂಡೆ ಮತ್ತು ಮದ್ದಲೆಯ ತಾಳ–ಲಯವನ್ನು ಮೈಗೂಡಿಸಿಕೊಂಡಿದ್ದ ಕುರುಪ್ ಅವರು ತೆಂಕು ತಿಟ್ಟಿನಲ್ಲಿ ಲಭ್ಯವಿರುವ ಅಧಿಕೃತ ಪಠ್ಯವನ್ನು ಬಳಸಿ ಪುಸ್ತಕಗಳನ್ನು ಬರೆದಿದ್ದಾರೆ. 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿದ್ದರು. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿ ಹೆಸರು ಗಳಿಸಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಸರ್ಕಾರದ ‘ಗುರುಪೂಜ’ ಪುರಸ್ಕಾರ ಲಭಿಸಿದೆ. ಕುರುಪ್ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ ಪಟ್ಟೇನದ ಪಾಲಕ್ಕುಳಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.