ADVERTISEMENT

‘ಜಾತಿಗೊಂದು ಮಠಕಟ್ಟಿ ಜಾತೀಯತೆ ಮಾಡಿಲ್ಲ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 5:40 IST
Last Updated 5 ಮಾರ್ಚ್ 2018, 5:40 IST

ದಾವಣಗೆರೆ: ‘ಸರ್ವ ಜನಾಂಗಗಳೂ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಜಾತಿಗೊಬ್ಬ ಸಮರ್ಥ ವ್ಯಕ್ತಿಯನ್ನು ಆರಿಸಿಕೊಂಡು ಸಮಾಜಸೇವಾ ದೀಕ್ಷೆ ನೀಡಲಾಗಿದೆ. ಇದರಲ್ಲಿ ಜಾತೀಯತೆ ಮಾಡುವ ಸಂಕುಚಿತ ಮನಸ್ಥಿತಿ ಅಡಗಿಲ್ಲ’ ಎಂದು ಮುರುಘಾ ಶರಣರು ಹೇಳಿದರು.

ಶನಿವಾರ ಜಯದೇವ ಶ್ರೀಗಳ ಸ್ಮರಣೋತ್ಸವ ಸಮಾರಂಭದಲ್ಲಿ ‘ಜಾತಿಗೊಂದು ಮಠ ಮಾಡಬೇಡಿ’ ಎಂಬ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಶರಣರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

‘ಶರಣರ ಮಾತನ್ನು ಎಲ್ಲ ಜನಾಂಗದವರೂ ಪಾಲಿಸುತ್ತಾರೆ ಎನ್ನಲಾಗುವುದಿಲ್ಲ. ಹಾಗಾಗಿ, ಮಾದಿಗ, ಛಲವಾದಿ, ಮಡಿವಾಳ, ಯಾದವ, ರೆಡ್ಡಿ, ಹೀಗೆ ಅವರವರ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ದೀಕ್ಷೆ ನೀಡಿ, ಅವರ ಮೂಲಕವೇ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಾತಿಗೊಂದು ಮಠದ ಪರಿಕಲ್ಪನೆಯಲ್ಲಿ ಕಾಳಜಿ ಇದೆಯೇ ಹೊರತು ಅನ್ಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಮಲ್ಲಿಕಾರ್ಜುನ ಖರ್ಗೆ ಅವರು 20 ವರ್ಷಗಳ ಹಿಂದೆ ಹೇಳಿದ್ದನ್ನು ಪುನರುಚ್ಚರಿಸಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.