
ಜಗಳೂರು: ಸರ್ಕಾರದ ಯಾವುದೇ ಯೋಜನೆಗಳು ಕಾರ್ಯಗತವಾಗಲು ಸಂಘಟನೆಗಳ ನಿರಂತರ ಹೋರಾಟ ಅಗತ್ಯ. ತಾಲ್ಲೂಕಿಗೆ ಭಧ್ರಾ ಮೆಲ್ದಂಡೆ ಯೋಜನೆ ಜಾರಿಯಾಗುವಲ್ಲಿ ಸಂಘಟನೆಗಳ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಅಭಿಪ್ರಾಯಪಟ್ಟರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ, ಕರುನಾಡ ನವ ನಿರ್ಮಾಣ ವೇದಿಕೆಯಿಂದ 70 ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಮತ್ತು ದೀನ ಬಂಧು ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
ಬರಪೀಡಿತ ಜಗಳೂರು ತಾಲೂಕಿಗೆ ೇತ ನೀರಾವರಿ ಯೋಜನೆಯಡಿ ಈಗಾಗಲೇ 57 ಕೆರೆ ನೀರು ಹರಿಯುತ್ತಿದೆ. 2017 ರಲ್ಲಿ ನಾನು ಶಾಸಕನಾಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ನೇತೃತ್ವದಲ್ಲಿ ತಾಲ್ಲೂಕಿನ ಸಮಸ್ತ ಜನರು ನಡೆಸಿದ ಹೋರಾಟದಿಂದ ಕ್ಷೇತ್ರಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮಂಜೂರಾತಿಯಾಯಿತು. ನನ್ನ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಂತಹ ಹೋರಾಟಕ್ಕೆ ಕನ್ನಡ ಸಂಘಟನೆಗಳು ಸಂಘಟನಾತ್ಮಕವಾಗಿ ಹೋರಾಡಿದ್ದವು. ಶಾಸಕನಾಗಿದ್ದ ನಾನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇನೆ ಎಂದು ಸ್ಮರಿಸಿದರು.
2022 ರಲ್ಲಿ ಸಮಾನ ಮನಸ್ಕರು ಸೇರಿ ಕರುನಾಡ ನವ ನಿರ್ಮಾಣ ವೇದಿಕೆ ಮೂಲಕ ಸಾಮಾಜಿಕ ಪರಿವರ್ತನೆ ಉದ್ದೇಶದಿಂದ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ಡಿಪೋ ಹೋರಾಟ, ರಸ್ತೆ ವಿಸ್ತರಣೆ, ಭದ್ರಾ ಮೇಲ್ದಂಡೆ ಯೋಜನೆಗಳಿಗಾಗಿ ಆಗ್ರಹಿಸಿ ನಡೆದ ಹೋರಾಟಗಳು ಯಶಸ್ವಿಯಾಗಿವೆ ಎಂದು ಕರುನಾಡು ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ ಹೇಳಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಸದಸ್ಯ ಆರ್. ಓಬಳೇಶ್ ಅವರಿಗೆ ಧೀನಬಂದು ಪ್ರಶಸ್ತಿ ನೀಡಲಾಯಿತು.
ಸಮಾರಂಭಕ್ಕೂ ಮುನ್ನ ಶಾಸಕ ಬಿ.ದೇವೇಂದ್ರಪ್ಪ ಮರವಣಿಗೆಗೆ ಚಾಲನೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಬಿ.ದೇವೇಂದ್ರಪ್ಪ ರಾಜ್ಯೋತ್ಸವದ ಮರವಣಿಗೆಗೆ ಚಾಲನೆ ನೀಡಿದರು. ಕೋಲಾಟ, ಡೊಳ್ಳುಕುಣಿತ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳು ಪ್ರವಾಸಿ ಮಂದಿರದಿAದ ತಾಪಂ ಸಭಾಂಗಣದವರೆಗೆ ವಿಜೃಂಭಣೆಯಿಂದ ತಾಯಿ ಭುವನೇಶ್ವರಿ ಮೆರವಣಿಗೆ ಸಾಗಿತು
ಟ್ರಸ್ಟ್ ನ ಕಾರ್ಯದರ್ಶಿ ರಘುರಾಮರೆಡ್ಡಿ, ಸಾಹಿತಿ ಎನ್.ಟಿ.ರ‍್ರಿಸ್ವಾಮಿ, ಮುಖಂಡ ಬಿಸ್ತುವಳ್ಳಿ ಬಾಬು, ಪಟ್ಟಣ ಪಂಚಾಯಿತಿ ಸದಸ್ಯ ಪಾಪಲಿಂಗಪ್ಪ, ಗೌರಿಪುರ ಕುಬೇಂದ್ರಪ್ಪ, ನಾಗಲಿಂಗಪ್ಪ, ತುಪ್ಪದಹಳ್ಳಿ ಪೂಜಾರ್ ಸಿದ್ದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.