ADVERTISEMENT

ದಾವಣಗೆರೆ ಎರಡನೇ ರಾಜಧಾನಿ ಆಗಲಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 5:55 IST
Last Updated 7 ಮಾರ್ಚ್ 2011, 5:55 IST

ದಾವಣಗೆರೆ: ಭೌಗೋಳಿಕ ದೃಷ್ಟಿಯಿಂದ ಉತ್ತರ ಕರ್ನಾಟಕದವರಿಗೂ ಸಮೀಪದವಾಗಿರುವ ಮಧ್ಯ ಕರ್ನಾಟಕದ ದಾವಣಗೆರೆ ರಾಜ್ಯದ ಎರಡನೇ ರಾಜಧಾನಿ ಆಗಲಿ ಎಂದು ದಾವಣಗೆರೆ ಜಿಲ್ಲಾ ಅಭಿವೃದ್ಧಿ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ.ನಗರದಲ್ಲಿ ಈಚೆಗೆ ಸಮಿತಿಯ ಸಭೆ ನಡೆಯಿತು.

ದಾವಣಗೆರೆಯಲ್ಲಿ ಒಂದು ಬಾರಿ ವಿಧಾನಸಭೆ ಅಧಿವೇಶನ ನಡೆಯಬೇಕು. ನಗರ 2ನೇ ರಾಜಧಾನಿಯಾದಲ್ಲಿ ಮಧ್ಯಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ಇದನ್ನು ಎಲ್ಲಾ ಜಿಲ್ಲೆಯವರೂ ಒಪ್ಪುತ್ತಾರೆ ಎಂದು ಸಭೆಯಲ್ಲಿ ಚರ್ಚೆಯಾಯಿತು.ಬೆಂಗಳೂರಿನಲ್ಲಿರುವ ಕೃಷಿ ಇಲಾಖೆ, ಆರೋಗ್ಯ, ಪಶುಸಂಗೋಪನಾ ಇಲಾಖೆ ಇತ್ಯಾದಿ ಇಲಾಖೆಗಳು ವಿಕೇಂದ್ರೀಕರಣವಾಗುವ ಆವಶ್ಯಕತೆ ಇದೆ. ವಿವಿಧ ಇಲಾಖೆಗಳು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ವಿಕೇಂದ್ರೀಕರಣಗೊಂಡಲ್ಲಿ ಸರ್ಕಾರ ಜನರ ಸಮಸ್ಯೆಗಳಿಗೆ ಸುಲಭವಾಗಿ ಸ್ಪಂದಿಸಬಹುದು ಎಂದು ಸಭೆಯಲ್ಲಿ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಂ.ಎಸ್.ಕೆ. ಶಾಸ್ತ್ರಿ, ಎಸ್.ಎಂ. ವೀರಭದ್ರಪ್ಪ, ಡಿ. ಅಸ್ಲಂಖಾನ್, ಚಂದ್ರಶೇಖರ್ ದಾನಪ್ಪ, ಬಿ.ಎಸ್. ಮಲ್ಲಿಕಾರ್ಜುನಪ್ಪ, ಕೆ.ಜಿ. ಶರಣಪ್ಪ, ಮಹಮ್ಮದ್ ಹಯಾತ್, ಎಲ್.ಎಚ್. ಅರುಣ್‌ಕುಮಾರ್, ಗಿರೀಶ್‌ರಾವ್ ಪವಾರ್, ಎನ್.ಎಸ್. ವೀರಭದ್ರಪ್ಪ, ದೇವರಹಟ್ಟಿ ಫಯಾಜ್, ಅಸ್ಗರ್‌ಅಹಮದ್, ಕೆ. ಹಾಲಪ್ಪ, ಅರುಣ್‌ಕುಮಾರ್ ಕುರುಡಿ, ಎಸ್.ಎಂ. ಗೌಸ್, ಸಿ. ವೀರಭದ್ರಪ್ಪ, ಬಿ.ಎಂ. ರವಿಕುಮಾರ್, ಎನ್. ಸಿದ್ದರಾಮಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.