ದಾವಣಗೆರೆ: ತಾಲ್ಲೂಕಿನ ಲೋಕಿಕೆರೆಯ ಬಳಿ ಶ್ರೀಗಂಧವನ್ನು ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಬಂಧಿಸಿರುವ ಪೊಲೀಸರು ₹ 1.90 ಲಕ್ಷ ಮೌಲ್ಯದ 19 ಕೆ.ಜಿ. 456 ಗ್ರಾಂ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಿಕೆರೆ ಹಾಗೂ ಯಲ್ಲಮ್ಮನಗರದ ನಿವಾಸಿ ಗಂಗಾಧರಪ್ಪ ಮತ್ತು ಈತನ ಸಹಚರ ಶಿವಮೊಗ್ಗ ನಿವಾಸಿ ಚೆಲುವ ಬಂಧಿತರು.
ಸಿಪಿಐ ಮಂಜುನಾಥ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಮಾಹಿತಿಯನ್ನಾಧರಿಸಿ ಅರಣ್ಯ ಇಲಾಖೆಯ ಡಿಆರ್‌ಎಫ್ ಡಿ. ರಾಮಚಂದ್ರಪ್ಪ ಅವರೊಂದಿಗೆ ಧಾವಿಸಿ ಆರೋಪಿ ಮನೆಯಲ್ಲಿ ಸಂಗ್ರಹಿಸಿದ್ದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ.
ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ಸಿಪಿಐ ಮಂಜುನಾಥ, ಹದಡಿ ಠಾಣೆಯ ಪಿಎಸ್ಐ ಪ್ರಸಾದ್, ಸಿಬ್ಬಂದಿ ಮಂಜುನಾಥ, ವಿಶ್ವನಾಥ, ಶಿವಕುಮಾರ್, ವೀರಭದ್ರಪ್ಪ, ಅಣ್ಣಪ್ಪ, ಸಿದ್ದೇಶ್, ಚಾಲಕ ಅಶೋಕ್ ಪಾಲ್ಗೊಂಡಿದ್ದರು.
ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಅವರು ಬಹುಮಾನ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.