ಹೊನ್ನಾಳಿ: ಪಟ್ಟಣದ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ನ ಆಡಳಿತ ಮಂಡಳಿಗೆ ಜnವರಿ 21ರಂದು ಭಾನುವಾರ ಚುನಾವಣೆ ನಡೆಯಲಿದೆ.
ಜನವರಿ 6ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಜನವರಿ 13ಕ್ಕೆ ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಜನವರಿ 14ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಿತು. ಒಟ್ಟು 38 ಜನ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಒಂದು ನಾಮಪತ್ರ ಮಾತ್ರ ತಿರಸ್ಕೃತವಾಗಿತ್ತು.
37 ನಾಮಪತ್ರಗಳ ಪೈಕಿ 27 ಜನ ಸಾಮಾನ್ಯ ವರ್ಗಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಅ ವರ್ಗಕ್ಕೆ ಮೂರು ಜನ, ಬ ವರ್ಗಕ್ಕೆ 3 ಜನ, ಎಸ್ಸಿಗೆ ಒಂದು, ಎಸ್‍ಟಿಗೆ ಒಂದು ಹಾಗೂ ಮಹಿಳೆಯರ ಮೀಸಲಾತಿ ಅಡಿ ಇಬ್ಬರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು.
ಅವಿರೋಧ ಆಯ್ಕೆ: ಎಸ್ಸಿ ವರ್ಗಕ್ಕೆ ಒಂದು, ಎಸ್‍ಟಿ ವರ್ಗಕ್ಕೆ ಒಂದು ಕ್ಷೇತ್ರಕ್ಕೆ ತಲಾ ಒಬ್ಬೊಬ್ಬರು ಹಾಗೂ ಮಹಿಳಾ ಮೀಸಲಾತಿ ಅಡಿ ಇಬ್ಬರು ಮಾತ್ರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ವರ್ಗಕ್ಕೆ 9 ಜನ ಆಯ್ಕೆಯಾಗಬೇಕಾಗಿದ್ದು, 12 ಜನರು ಕಣದಲ್ಲಿದ್ದಾರೆ. ಅ ವರ್ಗದಲ್ಲಿ ಮೂರು ಜನ ಹಾಗೂ ಬ ವರ್ಗದಲ್ಲಿ ಇಬ್ಬರು ಕಣದಲ್ಲಿದ್ದು, ಒಬ್ಬೊಬ್ಬರನ್ನು ಮಾತ್ರ ಚುನಾಯಿಸಬೇಕಾಗಿದೆ.
ಕಣದಲ್ಲಿ ಉಳಿದವರು: ಸಾಮಾನ್ಯ ವರ್ಗದಲ್ಲಿ ಕಣದಲ್ಲಿರುವವರು ಎಚ್.ಎಂ.ಅರುಣ್‍ಕುಮಾರ್, ಬಿ.ಎಚ್.ಉಮೇಶ್ ಬೆಳಗುತ್ತಿ, ಎನ್.ಜಯರಾವ್, ಕೆ.ಆರ್.ನಾಗರಾಜ್, ಜಿ.ಆರ್.ಪ್ರಕಾಶ್, ಎಚ್.ಬಿ.ಮೋಹನ್, ಮಂಜಪ್ಪ ಎಚ್., ಸಿ.ಕೆ.ರವಿಕುಮಾರ್, ರಾಜ್‍ಕುಮಾರ್ ಎಚ್.ಪಿ., ಎಚ್.ವೀರೇಶಪ್ಪ, ಕೆ.ಎಂ.ಶಿವಾನಂದಸ್ವಾಮಿ, ಎನ್.ಆರ್. ಸುಂದರೇಶ್.
ಪ್ರವರ್ಗ ‘ಅ’ ದಲ್ಲಿ ಅನಿಲ ಬಿ.ಎ., ಕೆ.ಎಂ.ರಘು, ಎಚ್.ಎಂ.ಶಿವಮೂರ್ತಿ ಹಾಗೂ ಪ್ರವರ್ಗ ‘ಬ’ದಲ್ಲಿ ಸಿ.ಎಚ್. ನಾಗರಾಜ್ ಮಾಸಡಿ ಹಾಗೂ ಡಿ.ಎನ್.ಶಾಂತಲಾ ಕಣದಲ್ಲಿದ್ದಾರೆ. 1,232 ಜನ ಅರ್ಹ ಮತದಾರರು ಇದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ನವಿನ್‍ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.