ADVERTISEMENT

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಶ್ರೇಯಾಂಕಿತರ ಗೆಲುವಿನ ಓಟ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 19:41 IST
Last Updated 15 ಅಕ್ಟೋಬರ್ 2025, 19:41 IST
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಗೆಲುವು ಸಾಧಿಸಿದ ಶಿವರಾಜ್ ಕಬ್ಬೇರಹಳ್ಳಿ ಅವರು ಷಟಲ್ ಹಿಂತಿರುಗಿಸಲು ಯತ್ನಿಸಿದರು  ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಗೆಲುವು ಸಾಧಿಸಿದ ಶಿವರಾಜ್ ಕಬ್ಬೇರಹಳ್ಳಿ ಅವರು ಷಟಲ್ ಹಿಂತಿರುಗಿಸಲು ಯತ್ನಿಸಿದರು  ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಶ್ರೇಯಾಂಕಿತ ಆಟಗಾರರು ಹಾಗೂ ಆಟಗಾರ್ತಿಯರು ಇಲ್ಲಿ ನಡೆಯುತ್ತಿರುವ 15 ಹಾಗೂ 17 ವರ್ಷ ದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌ನಲ್ಲಿ ಜಯದ ಓಟ ಮುಂದುವರಿಸಿದ್ದಾರೆ. 

ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ 32ನೇ ಸುತ್ತಿನ ಮೊದಲ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಆಟಗಾರ ಯಶಸ್ ಎಂ. ರೆಡ್ಡಿ 21–12, 21–11ರಿಂದ ತಮನ್ ಶ್ರೀಧರ್ ಅವರನ್ನು ಸೋಲಿಸಿದರು. 

ಈ ವಿಭಾಗದ ಇತರ ಪಂದ್ಯಗಳಲ್ಲಿ 7ನೇ ಶ್ರೇಯಾಂಕದ ಶ್ಯಾಮ್‌ ಬಿ. 21–12, 21–10ರಿಂದ ಸ್ವರಿತ್ ಎಸ್‌. ಶೆಟ್ಟಿ ವಿರುದ್ಧ, ಪರೀಕ್ಷಿತ್ ಪ್ರಸಾದ್ 21–19, 21–12ರಿಂದ ಅನುಜ್ ಶ್ರೇಯಕರ್ ವಿರುದ್ಧ, ಸಾತ್ವಿಕ್ ಎಸ್. ಪ್ರಭು 10–21, 21–16, 21–13 ರಿಂದ ಪ್ರದ್ಯೋತ್ ರವಿ ವಿರುದ್ಧ, ಶಿವರಾಜ್ ಕಬ್ಬೇರಹಳ್ಳಿ 15–21, 21–12, 21–14ರಿಂದ ನಿಶಾನ್ ಆರ್ಯ ವಿರುದ್ಧ ಗೆಲುವು ಸಾಧಿಸಿದರು.

ADVERTISEMENT

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದ 32ನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಹಿತೈಶ್ರೀ ಎಲ್. ರಾಜಯ್ಯ 21–8, 21–10ರಿಂದ ದೀಪ್ತಿಕಾ ಎದುರು ವಿಜಯಿಯಾದರು.  ಇತರೆ ಪಂದ್ಯಗಳಲ್ಲಿ 8ನೇ ಶ್ರೇಯಾಂಕಿತೆ ದೀಪ್ತಿ ಬಾಲಾಜಿ 21–19, 16–21, 21–17ರಿಂದ ಅದಿತಿ ಸುಶಾಂತ್‌ ಎದುರು, 3ನೇ ಶ್ರೇಯಾಂಕಿತೆ ಆಶಿ ದಾಸ್‌ 21–10, 21–17ರಿಂದ ರುಥಿ ಎಂ.ಪಿ. ಎದುರು, 7ನೇ ಶ್ರೇಯಾಂಕಿತೆ ಕಾಮಾಕ್ಯ ರೆಡ್ಡಿ 19–21, 21–6, 21–18ರಿಂದ ಹನ್ಸಿಕಾ ರಾಕೇಶ್ ಎದುರು, ರಚನಾ ಎಂ. 18–21, 22–20, 21–13ರಿಂದ ಎ.ನಿತ್ಯಾ ವಿರುದ್ಧ ಗೆಲುವು ಕಂಡರು. 

ವಿಹಾ‌ನ್, ಆದಿತ್ಯಗೆ ಜಯ: 15 ವರ್ಷದೊಳಗಿನ ಬಾಲಕರ ಸಿಂಗಲ್ಸ್ ವಿಭಾಗದ 32ನೇ ಸುತ್ತಿನ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕಿತ ವಿಹಾನ್ ಸಿ. ಹಾಗೂ 8ನೇ ಶ್ರೇಯಾಂಕದ ಆದಿತ್ಯ ಜೋಶಿ ವಿಜಯ ಸಾಧಿಸಿದರು.

ವಿಹಾನ್‌ 21–3, 21–11ರಿಂದ ದೇವಿಚಂದ್ರ ಜಿ.ಸಿ. ವಿರುದ್ಧ ಗೆದ್ದರೆ, ಆದಿತ್ಯ 21–17, 26–24ರಿಂದ ಯಶವರ್ಧನ್ ಎಸ್.ಆರ್. ಅವರನ್ನು ಮಣಿಸಿದರು. 

3ನೇ ಶ್ರೇಯಾಂಕದ ಆಡ್ರಿಯನ್ ಎಡ್ವರ್ಡ್‌ 21–12, 21–10ರಿಂದ ರಾಘವ ಗೌಡ ವಿರುದ್ಧ, 6ನೇ ಶ್ರೇಯಾಂಕದ ಗೌತಮ್ ಎಸ್. ನಾಯರ್ 21–10, 21–11ರಿಂದ ಮಾಧವ ಸತೀಶ್ ವಿರುದ್ಧ, ಆಯುಷ್‌ ಮಿಶ್ರಾ 21–15, 21–23, 23–21ರಿಂದ ಹರ್ಷಿತ್ ಶಂಕರ್ ವಿರುದ್ಧ, ಅರ್ಜುನ್ ಅಗರವಾಲ್ 14–21, 24–22, 21–10ರಿಂದ ಋಗ್ವೇದ್ ಆರ್. ವಿರುದ್ಧ ಜಯ ಸಾಧಿಸಿದರು.

15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಪಂದ್ಯಗಳಲ್ಲಿ ಅಗ್ರ ಶ್ರೇಯಾಂಕಿತೆ ಧನ್ಯಾ ಮಂಜುನಾಥ್ 13–21, 21–10, 21–10ರಿಂದ ನಿಹಾರಿಕಾ ಎ.ಪಿ. ವಿರುದ್ಧ, 8ನೇ ಶ್ರೇಯಾಂಕದ ಸುಪ್ರಿತಾ ದೀಪಕ್ 21–7, 21–11ರಿಂದ ದಕ್ಷಿತಾ ಎಂ. ವಿರುದ್ಧ, 3ನೇ ಶ್ರೇಯಾಂಕದ ಸ್ಮೃತಿ ಎಸ್. 21–18, 21–14ರಿಂದ ಪ್ರಿಯಾಂಕಾ ಪಾರ್ಮರ್ ವಿರುದ್ಧ, 5ನೇ ಶ್ರೇಯಾಂಕದ ಶ್ರೀನಾಗಲಕ್ಷ್ಮಿ
21–17, 21–19ರಿಂದ ಸಿರಿ ಟಿ.ಆರ್‌. ವಿರುದ್ಧ, ಲೇಖನಿ ಶ್ರೀನಿವಾಸ್ 16–21, 21–13, 25–23ರಿಂದ ಅನ್ವಿತಾ ಶೇಖರ್ ವಿರುದ್ಧ, ಶ್ರೇಯಾ ಗುಂಟೂರಿ 21–17, 14–21, 21–14ರಿಂದ ಚೇತನಾ ಸಂತೋಷ್ ವಿರುದ್ಧ
ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.