ADVERTISEMENT

ದಾವಣಗೆರೆ: ಬಾಲ್ಯ ವಿವಾಹಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:09 IST
Last Updated 10 ಜುಲೈ 2020, 14:09 IST

ದಾವಣಗೆರೆ: ನಗರದ ವಾರ್ಡೊಂದರಲ್ಲಿ ಆಂಧ್ರಮೂಲದ ವರನೊಂದಿಗೆ ಬಾಲಕಿಯ ಮದುವೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ತಡೆಹಿಡಿಯಲಾಗಿದೆ.

ದೂರು ಬಂದ ಹಿನ್ನೆಲೆಯಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಟಿ.ಎಂ. ಕೊಟ್ರೇಶ್ ಅವರು ಬಾಲಕಿಯ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿ ನೋಡಿದಾಗ ಬಾಲಕಿಯ ವಯಸ್ಸು 16 ವರ್ಷ ಮೂರು ತಿಂಗಳಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಂಗಾಧರಯ್ಯ, ಮೇಲ್ವಿಚಾರಕಿ ರತ್ನಮ್ಮ ರಂಗಣ್ಣನವರ್ ಹಾಗೂ ಸಹಾಯಕ ಕುಮಾರ್, ಮಕ್ಕಳ ಸಹಾಯವಾಣಿಯ ಕ್ಷೇತ್ರ ಕಾರ್ಯಕರ್ತ ಪ್ರಶಾಂತ್ ವಿ.ಬಿ. ಇವರೊಂದಿಗೆ ಬಾಲಕಿಯ ಮನೆಗೆ ತೆರಳಿ, ಪೋಷಕರಿಗೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಬಾಲ್ಯವಿವಾಹವನ್ನು ತಡೆಯಲು ಮುಂದಾದಾಗ ಬಾಲಕಿಯ ತಾಯಿ ಪ್ರತಿರೋಧಿಸಿದರು. ನಂತರ ಬಾಲಕಿ ಹಾಗೂ ಅವಳ ತಾಯಿ ಮತ್ತು ಭಾವನನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು. ಬಾಲ್ಯ ವಿವಾಹ ಮಾಡಿದರೆ ₹ 1ಲಕ್ಷ ದಂಡ, ಒಂದು ವರ್ಷಕ್ಕೆ ಕಡಿಮೆಯಿಲ್ಲದಂತೆ ಎರಡು ವರ್ಷಕ್ಕೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯಾಗಲಿದೆ’ ಎಂಬುದಾಗಿ ಪೋಷಕರಿಗೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.