
ಮಲೇಬೆನ್ನೂರು: ಸಮೀಪದ ಹಳ್ಳೀಹಾಳ್ ಗ್ರಾಮದ ಮುರುಡ ಬಸವೇಶ್ವರ ಹಾಗೂ ವಡೆಯರ ಬಸವಾಪುರ ಗ್ರಾಮದ ಬಸವೇಶ್ವರ ದೇವರ ರಥೋತ್ಸವ ಬುಧವಾರ ವೈಭವದಿಂದ ಜರುಗಿತು.
ಸಾಂಪ್ರದಾಯಿಕ ರಥಪೂಜೆ, ಬಲಿದಾನದ ನಂತರ ರಥಾರೋಹಣವಾಯಿತು. ಭಕ್ತರು ರಥಕ್ಕೆ ಉತ್ತುತ್ತಿ, ಬಾಳೆಹಣ್ಣು ಹಾಗೂ ಚಕ್ರಕ್ಕೆ ತೆಂಗಿನಕಾಯಿ ಸಮರ್ಪಣೆ ಮಾಡಿ ‘ಹರಹರ ಮಹಾದೇವ’, ‘ಬಸವೇಶ್ವರ ಮಹಾರಾಜ್ ಕೀ ಜೈ’ ಎಂದು ಘೋಷಣೆ ಹಾಕುತ್ತಾ ರಥ ಎಳೆದರು.
ತಮಟೆ, ಡೊಳ್ಳು, ಪುರವಂತರ ವೀರಭದ್ರ ದೇವರ ಕುಣಿತ, ಕೀಲುಕುದುರೆ ಕುಣಿತ, ಮಂಗಳವಾದ್ಯ ಉತ್ಸವಕ್ಕೆ ಕಳೆ ತಂದಿವೆ.
ದೇವಾಲಯ, ಮುಖ್ಯಬೀದಿಗೆ ಮಿನುಗುವ ವಿದ್ಯುದ್ದೀಪ, ರಥಕ್ಕೆ ಧ್ವಜ ಹಾಗೂ ಹೂವಿನಿಂದ ಅಲಂಕರಿಸಿದ್ದರು. ಹೆಚ್ಚಿನ ಸಂಖ್ಯೆಯ ಭಕ್ತರು ಉತ್ಸವಕ್ಕೆ ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.