ADVERTISEMENT

ದಾವಣಗೆರೆ: 18 ಶಿಕ್ಷಕರಿಗೆ ‘ಉತ್ತಮ ಶಿಕ್ಷಕ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:10 IST
Last Updated 4 ಸೆಪ್ಟೆಂಬರ್ 2025, 6:10 IST
   

ದಾವಣಗೆರೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರದಾನ ಮಾಡುವ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ 18 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ವಿಭಾಗದಿಂದ 12 ಮತ್ತು ಪ್ರೌಢಶಾಲಾ ವಿಭಾಗದಿಂದ 6 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರಾಥಮಿಕ ಶಾಲಾ ವಿಭಾಗ:

ಚನ್ನಗಿರಿಯ ಸಂತೆಮೈದಾನದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮೊಹಮ್ಮದ್ ಮುಹೀಬ್ ಉಲ್ಲಾ, ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ಮಂಜುನಾಥ ಕೆ.ಬಿ, ದಾವಣಗೆರೆ ಉತ್ತರ ವಲಯದ ಹೆಬ್ಬಾಳು ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಾಯಿತ್ರಿ ಬಿ. ಐರಣಿ, ದುಗ್ಗಮ್ಮನ ಪೇಟೆಯ ಹನುಮಂತ ನಾಯ್ಕ.ಸಿ, ದಾವಣಗೆರೆ ದಕ್ಷಿಣವಲಯದ ಕಾವೇರಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಕಮಹಾದೇವಿ ಕೆ.ಎಂ, ಕೋಲ್ಕುಂಟೆಯ ವೀರೇಶ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಹರಿಹರ ತಾಲ್ಲೂಕಿನ ಮಲೆಬೆನ್ನೂರಿನ ಮಾರುತಿ ಅನುದಾನಿತ ಹಿರಿಯ ಪಾಥಮಿಕ ಶಾಲೆಯ ಪರಮೇಶ್ವರಪ್ಪ.ಸಿ, ಕೊಕ್ಕನೂರು ಶಾಲೆಯ ಶ್ರೀಕಾಂತಚಾರಿ ಜೆ.ಜಿ, ಹೊನ್ನಾಳಿ ತಾಲ್ಲೂಕಿನ ಸದಾಶಿವಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಲ್ಲಿಕಾರ್ಜುನ್ ಬಡಿಗೇರ್, ಕಮ್ಮಾರಗಟ್ಟೆ ಗ್ರಾಮದ ಕುಮಾರ್ ನಾಯ್ಕ, ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಪ್ಪಾಲತಾ.ಎಸ್.ಎನ್ ಹಾಗೂ ತೋರಣಗಟ್ಟೆ ಶಾಲೆಯ ಸಹಶಿಕ್ಷಕ ರಂಗಪ್ಪ ವೆಂಕಪ್ಪನವರ್ ಅವರಿಗೆ ಪ್ರಶಸ್ತಿ ಲಭಿಸಿದೆ.

ADVERTISEMENT

ಪ್ರೌಢಶಾಲಾ ವಿಭಾಗ:

ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಬಾಲಿಕ ಪ್ರೌಢಶಾಲೆಯ ಎಚ್‌.ಕೃಷ್ಣಮೂರ್ತಿ, ದಾವಣಗೆರೆ ಉತ್ತರ ವಲಯದ ಸರ್ಕಾರಿ ಪ್ರೌಢಶಾಲೆಯ ಪಿ.ವೀರೇಶ್, ದಕ್ಷಿಣ ವಲಯದ ತರಳಬಾಳು ಪ್ರೌಢಶಾಲೆಯ ಶರತ್ ಆರ್, ಹರಿಹರ ತಾಲ್ಲೂಕಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಂತೋಷ ನೂಲಗೇರಿ, ಹೊನ್ನಾಳಿ ತಾಲ್ಲೂಕಿ ಹಿರೇಗೋಣಿಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜಯ್ ಸೊಲ್ಲಾಪುರ, ಜಗಳೂರು ತಾಲ್ಲೂಕಿನ ಗೌರಿಪುರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಕರಿಬಸಪ್ಪ ಎಚ್.ಎಂ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.5 ರಂದು ಬೆಳಿಗ್ಗೆ 10ಕ್ಕೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಿಡಿಪಿಐ ಜಿ.ಕೊಟ್ರೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.