ADVERTISEMENT

ಲಂಚ: ಗ್ರಾ.ಪಂ ಸದಸ್ಯರು ಸೇರಿ ಮೂವರು ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:26 IST
Last Updated 27 ಸೆಪ್ಟೆಂಬರ್ 2025, 0:26 IST
ಎಚ್.ಕೆ. ಪ್ರದೀಪ
ಎಚ್.ಕೆ. ಪ್ರದೀಪ   

ಚನ್ನಗಿರಿ: ತಾಲ್ಲೂಕಿನ ಹೊದಿಗೆರೆಯ ಸರ್ಕಾರಿ ಬಾಲಕರ ಶಾಲೆ ಕೊಠಡಿಯ ಚಾವಣಿ ನಿರ್ಮಾಣ ಆರಂಭಿಸಲು ಗುತ್ತಿಗೆದಾರರಿಂದ ಲಂಚ ಪಡೆಯುವಾಗ ಗ್ರಾಮ ಪಂಚಾಯಿತಿ ಇಬ್ಬರು ಸದಸ್ಯರು, ಒಬ್ಬ ನಿವಾಸಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಶಾಲೆ ಕೊಠಡಿಗೆ ಚಾವಣಿ ನಿರ್ಮಿಸಲು ₹ 2 ಲಕ್ಷದ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಅನುಮೋದನೆ ನೀಡಿತ್ತು. ಶಿವಮೊಗ್ಗದ ಗುತ್ತಿಗೆದಾರ ಸುನೀಲ್ ಗುತ್ತಿಗೆ ಪಡೆದಿದ್ದು, ನಿರ್ವಹಣೆಯ ಉಸ್ತುವಾರಿಯನ್ನು ಜಾವೀದ್‌ ಅಹಮದ್‌ಗೆ ವಹಿಸಿದ್ದರು.

ಕಾಮಗಾರಿ ಆರಂಭಿಸಲು ಜಾವೀದ್ ಬಂದಾಗ ಹೊದಿಗೆರೆ ಗ್ರಾ.ಪಂ. ಸದಸ್ಯರಾದ ಪ್ರದೀಪ, ಶಿವಕುಮಾರ, ಗ್ರಾಮಸ್ಥ ಮಂಜು ₹ 30,000 ಲಂಚ ನೀಡಬೇಕು ಎಂದು ಕೇಳಿದರು 

ADVERTISEMENT

ಈ ಬಗ್ಗೆ ದೂರು ಆಧರಿಸಿ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ, ಪಿಎಸ್ಐ ಸರಳಾ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ₹ 10,000 ಲಂಚ ಪಡೆಯುವಾಗ ಹಣದ ಸಮೇತ ಮೂವರನ್ನು ವಶಕ್ಕೆ ಪಡೆದಿದ್ದಾರೆ ಲೋಕಾಯುಕ್ತ ಎಸ್.ಪಿ. ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ.

ಕೆ. ಶಿವಕುಮಾರ
ಎಚ್. ಮಂಜಪ್ಪ

ಚನ್ನಗಿರಿ: ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು

ಗ್ರಾಮ ಪಂಚಾಯಿತಿ ಸದಸ್ಯರು ಒಬ್ಬ ಗ್ರಾಮಸ್ಥ ಪ್ರಜಾವಾಣಿ ವಾರ್ತೆ ಚನ್ನಗಿರಿ: ತಾಲ್ಲೂಕು ಹೊದಿಗೆರೆ ಗ್ರಾಮದ ಸರ್ಕಾರಿ ಬಾಲಕರ ಶಾಲೆಯ ಕಂಪ್ಯೂಟರ್ ಕೊಠಡಿಯ ಮೇಲ್ಛಾವಣಿಯನ್ನು ಹಾಕುವ ಕಾಮಗಾರಿ ಆರಂಭಿಸಲು ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಒಬ್ಬ ಗ್ರಾಮಸ್ಥ ಸಂಬಂಧಪಟ್ಟ ಗುತ್ತಿಗೆದಾರರಿಂದ ಲಂಚದ ಹಣವನ್ನು ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ಘಟನೆ ಗುರುವಾರ ಸಂಜೆ ಗ್ರಾಮದಲ್ಲಿ ನಡೆದಿದೆ.

2024-25 ನೇ ಸಾಲಿನ 15 ನೇ ಹಣಕಾಸು ಯೋಜನೆ ಅಡಿ ಗ್ರಾಮದ ಸರ್ಕಾರಿ ಬಾಲಕರ ಶಾಲೆಯ ಕಂಪ್ಯೂಟರ್ ಕೊಠಡಿಗೆ ಮೇಲ್ಛಾವಣಿ ಹಾಕುವ ಕಾಮಗಾರಿ ರೂ 2 ಲಕ್ಷಕ್ಕೆ ಚನ್ನಗಿರಿಯ ಪಂಚಾಯತ್ ರಾಜ್ ಇಲಾಖೆಯಿಂದ ಅನುಮೋದನೆ ಸಿಕ್ಕು ಶಿವಮೊಗ್ಗದ 2 ನೇ ದರ್ಜೆ ಗುತ್ತಿಗೆದಾರ ಸುನೀಲ್ ಅವರು ಟೆಂಡರ್ ನಲ್ಲಿ ಗುತ್ತಿಗೆಯನ್ನು ಪಡೆದುಕೊಂಡಿದ್ದರು. ಈ ಗುತ್ತಿಗೆದಾರರು ಈ ಗುತ್ತಿಗೆ ನಿರ್ವಹಣೆಯನ್ನು ಶಿವಮೊಗ್ಗ ಶಾಂತಿನಗರ ವಾಸಿ ಜಾವೀದ್ ಅಹಮದ್ ಗೆ ಉಸ್ತುವಾರಿ ವಹಿಸಿದ್ದರು. ಕಾಮಗಾರಿಯನ್ನು ಆರಂಭಿಸಲು ಜಾವೀದ್ ಅಹಮದ್ ಬಂದಾಗ ಹೊದಿಗೆರೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರದೀಪ ಶಿವಕುಮಾರ ಹಾಗೂ ಗ್ರಾಮಸ್ಥ ಮಂಜು ಎಂಬುವವರು ಕಾಮಗಾರಿ ಆರಂಭಿಸಲು ಇವರ ಬಳಿ ರೂ 30 ಸಾವಿರ ಲಂಚವನ್ನು ನೀಡಬೇಕು ಎಂದು ಬೇಡಿಕೆಯನ್ನು ಇಟ್ಟಿದ್ದರು.

ಕಾಮಗಾರಿ ಆರಂಭಕ್ಕೆ ಲಂಚವನ್ನು ಕೊಡಲು ಇಷ್ಟವಿಲ್ಲದ ಕಾರಣ ಜಾವೀದ್ ಅಹಮದ್ ಅವರು ಪ್ರದೀಪ ಶಿವಕುಮಾರ ಹಾಗೂ ಮಂಜು ಎಂಬುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇವರು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಸೆ. 25ರಂದು ಕಾರ್ಯಾಚರಣೆ ನಡೆಸಿ ರೂ 10000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿತರಾದ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರದೀಪ ಶಿವಕುಮಾರ ಹಾಗೂ ಗ್ರಾಮಸ್ಥ ಮಂಜು ಅವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಎಂ.ಎಸ್. ಕೌಲಾಪೂರೆ ತಿಳಿಸಿದ್ದಾರೆ. ಡಿವೈಎಸ್ ಪಿ ಕಲಾವತಿ ಪಿಎಸ್ಐ ಸರಳ ಎಚ್. ಗುರುಬಸವರಾಜ ಪ್ರಭು ಬ. ಸೂರಿನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.