ಹರಿಹರ: ನಗರದ ಹೊರವಲಯದ ರೈಲ್ವೆ ಮೇಲು ಸೇತುವೆ ಸಮೀಪದ ಡಿ.ಬಿ. ಕೆರೆ ಕಾಲುವೆಗೆ ಮಂಗಳವಾರ ಕಾರೊಂದು ಬಿದ್ದಿದ್ದು, ಸ್ಥಳೀಯರು ಐವರು ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಇಲ್ಲಿನ ಇಂದಿರಾನಗರದ ವಾಸಿ ಕಿಶೋರ್ ಎಂಬುವವರು ತಮ್ಮ ಮೂವರು ಮಕ್ಕಳು ಹಾಗೂ ಚಾಲಕನೊಂದಿಗೆ ದಾವಣಗೆರೆಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ.
ರಾತ್ರಿ 10 ಗಂಟೆ ಸಮಯಕ್ಕೆ ಕಾಲುವೆಗೆ ಕಾರು ಬಿದ್ದಿದ್ದು, ಶಬ್ಧ ಕೇಳಿದ ಸಮೀಪದ ನಿವಾಸಿ ಮಂಡಕ್ಕಿ ಭಟ್ಟಿ, ಸೈಯದ್ ಆರಿಫ್ ಸ್ಥಳಕ್ಕೆ ಬಂದು ತಮ್ಮ ಸ್ನೇಹಿತಉನ್ನೂ ಕರೆ ಮಾಡಿ ಕರೆಸಿ, ತಕ್ಷಣ ನೀರಿಗೆ ಇಳಿದು ನಾಲ್ವರನ್ನೂ ಕಾಲುವೆಯಿಂದ ಹೊರ ತಂದಿದ್ದಾರೆ.
ಕಾರು ಬಿದ್ದ ರಭಸಕ್ಕೆ ನಾಲ್ವರಿಗೂ ಸಣ್ಣ, ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
3ನೇ ದುರಂತ: 2 ತಿಂಗಳ ಹಿಂದೆಯೂ ಕಾರೊಂದು ಇದೇ ಸ್ಥಳದಲ್ಲಿ ಕಾಲುವೆಗೆ ಬಿದ್ದಿದ್ದು, ಯಾವುದೆ ಸಾವು, ನೋವುಗಳಾಗಿರಲಿಲ್ಲ. ನಂತರ ಆಟೋವೊಂದು ಬಿದ್ದಿದ್ದು, ಆಗಲೂ ಸ್ಥಳೀಯರು ರಕ್ಷಿಸಿದ್ದರು.
ನಗರದ ಬೆಂಕಿನಗರ, ಕಾಳಿದಾಸ ನಗರ, ಪ್ರಶಾಂತ್ ನಗರ, ನೀಲಕಂಠನಗರ, ಇಂದಿರಾನಗರ, ವಿದ್ಯಾನಗರ ಸೇರಿ ಹಲವು ಬಡಾವಣೆಗಳ ನಿವಾಸಿಗಳಿಗೆ ದಾವಣಗೆರೆಗೆ ಹೋಗಿ–ಬರಲು ಇದು ಬೈಪಾಸ್ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿದ್ದು, ತಡೆಗೋಡೆ ನಿರ್ಮಿಸಬೇಕೆಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.