ADVERTISEMENT

ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಅಸಾಧ್ಯ: ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 15:26 IST
Last Updated 22 ಜುಲೈ 2025, 15:26 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ದಾವಣಗೆರೆ: ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗದು. ವಿಜಯಾನಂದ ಕಾಶಪ್ಪನವರ್‌ ಅವರಂತಹ ನೂರು ಜನ ಬಂದರೂ ಇದು ಸಾಧ್ಯವಿಲ್ಲ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.

‘2ಎ ಮೀಸಲಾತಿ ಸೌಲಭ್ಯಕ್ಕೆ ಒತ್ತಾಯಿಸಿ ಪಂಚಮಸಾಲಿ ಸಮುದಾಯ ನಡೆಸಿದ ಹೋರಾಟದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಪಾತ್ರ ನಗಣ್ಯ. ಸಮುದಾಯದ ಗಣ್ಯರು ಹೋರಾಟಕ್ಕೆ ನೀಡಿದ ಹಣವನ್ನೂ ಜೇಬಿಗೆ ಇಳಿಸಿಕೊಂಡಿದ್ದಾರೆ’ ಎಂದು ಸುದ್ದಿಗಾರರ ಬಳಿ ಆರೋಪಿಸಿದರು.

‘ಬಾಯಿಗೆ ಬಂದಂತೆ ಮಾತನಾಡುವ ಕಾಶಪ್ಪನವರ್‌ ಒಬ್ಬ ಹುಚ್ಚ. ಅವನಂತೆ ಅವಾಚ್ಯ ಶಬ್ದಗಳಿಂದ ನಿಂದಿಸಲು ನನಗೂ ಸಾಧ್ಯವಿದೆ. ಆದರೆ, ನನಗೆ ಸಂಸ್ಕಾರವಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.