
ದಾವಣಗೆರೆ: ಸೇವಾ ಶುಲ್ಕ (ಸರ್ವೀಸ್ ಚಾರ್ಜ್) ಪಾವತಿಸಲಾಗದೇ ಎರಡು ತಿಂಗಳಿನಿಂದ ಸರ್ವೀಸ್ ಸೆಂಟರ್‌ನಲ್ಲೇ ಉಳಿದಿದ್ದ ‘ನಗು–ಮಗು’ ಆಂಬುಲೆನ್ಸ್ ಸಿ.ಜಿ.ಆಸ್ಪತ್ರೆಯ ಆವರಣಕ್ಕೆ ಬಂದಿದೆ.
ಆರು ತಿಂಗಳಿನಿಂದ ಕೆಟ್ಟು ನಿಂತಿದ್ದ ಆ್ಯಂಬುಲೆನ್ಸ್ ಅನ್ನು ದುರಸ್ತಿ ಹಾಗೂ ಸರ್ವೀಸ್‌ಗಾಗಿ ಬಾಡ ಕ್ರಾಸ್ ಬಳಿ ಇರುವ ಪ್ರೇರಣಾ ಸರ್ವೀಸ್ ಸೆಂಟರ್‌ಗೆ ಬಿಡಲಾಗಿತ್ತು. ಸರ್ವೀಸ್ ಮುಗಿದ ಬಳಿಕ ₹32 ಸಾವಿರ ಬಿಲ್ ಅನ್ನು ನೀಡಿತ್ತು. ಆದರೆ ಸಿಜಿ ಆಸ್ಪತ್ರೆ ಬಿಲ್ ಪಾವತಿ ಮಾಡಿಲ್ಲದೇ ಇರುವುದರಿಂದ ಆ್ಯಂಬುಲೆನ್ಸ್ ಅಲ್ಲಿಯೇ ಉಳಿದಿತ್ತು. ಇದೀಗ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ನಿರ್ದೇಶನದ ಮೇರೆಗೆ ಹಣ ಪಾವತಿಯಾಗಿದೆ. ಆಂಬುಲೆನ್ಸ್‌ಗೆ ಹೊಸ ಬ್ಯಾಟರಿಯನ್ನು ಅಳವಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಈ ಕುರಿತು ಕ್ರಮ ವಹಿಸುವಂತೆ ಸೂಚಿಸಿದ್ದರು.
ಈ ಕುರಿತು ‘ಪ್ರಜಾವಾಣಿ’ ಏಪ್ರಿಲ್ 19ರ ಸಂಚಿಕೆಯಲ್ಲಿ ‘ಸರ್ವೀಸ್ ಸೆಂಟರ್‌ನಲ್ಲಿಯೇ ಉಳಿದ ನಗು–ಮಗು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.