ADVERTISEMENT

ಚನ್ನಗಿರಿ | ಕಾಲೇಜಿಗೆ ಬೀಗ: ವಿದ್ಯಾರ್ಥಿಗಳು ಅತಂತ್ರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:16 IST
Last Updated 19 ಜೂನ್ 2025, 14:16 IST
ಚನ್ನಗಿರಿ ತಾಲ್ಲೂಕು ಚಿಕ್ಕೂಲಿಕೆರೆ ಗ್ರಾಮದ ಬಳಿ ಇರುವ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಒಂದು ನೋಟ.
ಚನ್ನಗಿರಿ ತಾಲ್ಲೂಕು ಚಿಕ್ಕೂಲಿಕೆರೆ ಗ್ರಾಮದ ಬಳಿ ಇರುವ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಒಂದು ನೋಟ.   

ಚನ್ನಗಿರಿ: ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದಲ್ಲಿರುವ ಸಿದ್ದೇಶ್ವರ ಅರೆ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, 120 ವಿದ್ಯಾರ್ಥಿಗಳ ಭವಿಷ್ಯ ಅಂತ್ರದಲ್ಲಿದೆ.

ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳನ್ನು ವಿವಿಧ ಪ್ರಯೋಗಾಲಯಗಳಿಗೆ ನಿಯೋಜಿಸಲಾಗಿದೆ. ಕಾಲೇಜು ಕಟ್ಟಡದ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದೆ ಎನ್ನಲಾಗಿದೆ.

‘ಕಟ್ಟಡದ ಕ್ರಯಪತ್ರ ಅಡವಿಟ್ಟು ಸಾಲ ಪಡೆಯಲಾಗಿತ್ತು. 8 ದಿನಗಳ ಹಿಂದೆ ಸಾಲಗಾರರು ಪೀಠೋಪಕರಣ ಹೊರಹಾಕಿ ಕಟ್ಟಡಕ್ಕೆ ಬೀಗ ಹಾಕಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಉಂಟಾಗದಂತೆ ಪ್ರಯೋಗಾಲಯಗಳಿಗೆ ನಿಯೋಜಿಸಲಾಗಿದೆ’ ಎಂದು ಸಿದ್ದೇಶ್ವರ ಅರೆ ವೈದ್ಯಕೀಯ ಕಾಲೇಜು ಸಂಸ್ಥಾಪಕಿ ರೂಪಾ ಸ್ಪಷ್ಟನೆ ನೀಡಿದ್ದಾರೆ.

ADVERTISEMENT
ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪೀಠೋಪಕರಣಗಳನ್ನು ಹೊರ ಹಾಕಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.